ಎಂ ಎಸ್ ಸ್ವಾಮಿನಾಥನ್ 2024ರ ಮರಣೋತ್ತರ ಭಾರತ ರತ್ನ ಪ್ರಶಸ್ತಿ ವಿಜೇತ

 

ಹಸಿರು ಕ್ರಾಂತಿಯ ಜನಕ ಎಂ ಎಸ್ ಸ್ವಾಮಿನಾಥನ್ ರವರಿಗೆ ಭಾರತ ಸರ್ಕಾರವು 2024ನೇ ಸಾಲಿನಲ್ಲಿ ಭಾರತ ರತ್ನ ಪ್ರಶಸ್ತಿ ಗೌರವ ಘೋಷಿಸಿದೆ. ಇವರ ಜೊತೆಗೆ ಇನ್ನೂ ನಾಲ್ಕು ಜನರಿಗೆ ಭಾರತ ರತ್ನ ಪ್ರಶಸ್ತಿ ಗೌರವವನ್ನು ನೀಡಿದೆ. ಈ ಪೋಸ್ಟ್ ನಲ್ಲಿ ನಿಮಗೆ ಎಂ ಎಸ್ ಸ್ವಾಮಿನಾಥನ್ ಅವರ ಬಗ್ಗೆ ಸಂಕ್ಷಿಪ್ತ ಪರಿಚಯ ಮತ್ತು ಅವರ ಸಾಧನೆಗಳನ್ನು ನಿಮಗೆ ಒದಗಿಸಿದ್ದೇವೆ.

ಎಂ ಎಸ್ ಸ್ವಾಮಿನಾಥನ್

 

ಸಂಕ್ಷಿಪ್ತ ಪರಿಚಯ

 

ಸ್ನೇಹಿತರು ಮತ್ತು ಸಹೋದ್ಯೋಗಿಗಳು ಪ್ರೀತಿಯಿಂದ ಎಂ ಎಸ್ ಎಂದು ಕರೆಯುತ್ತಿದ್ದರು.

 

2024ರಲ್ಲಿ ಮರಣೋತ್ತರವಾಗಿ ಭಾರತ ರತ್ನ ಗೌರವಕ್ಕೆ ಪಾತ್ರರಾಗಿದ್ದಾರೆ.

 

ಜನಿಸಿದ ಸ್ಥಳ: ತಮಿಳುನಾಡಿನ ಕುಂಭಕೋಣಂ

 

ತಂದೆ: ಡಾಕ್ಟರ್ ಎಂ ಕೆ ಸಾಂಬಶಿವನ್

 

ತಾಯಿ: ಪಾರ್ವತಿ ತಂಗಮ್ಮ

 

ಜನುಮದ ದಿನಾಂಕ: 1925 ಆಗಸ್ಟ್ 7

 

ಮರಣದ ದಿನಾಂಕ: 2023 ಸೆಪ್ಟೆಂಬರ್ 28

 

ಜೀವಿತಾವಧಿ: 98 ವರ್ಷ

 

ನಿಧನ: ಚೆನ್ನೈ

 

ಇವರ ಮುಂದಾಳತ್ವದಲ್ಲಿ ಆರು ದಶಕಗಳ ಹಿಂದೆ ನಡೆದ ‘ಹಸಿರು ಕ್ರಾಂತಿ’ ದೇಶವು ಆಹಾರ ಕ್ಷಾಮವನ್ನು ಮೆಟ್ಟಿ ನಿಲ್ಲಲು ನೆರವಾಯಿತು. ಗೋಧಿ ಉತ್ಪಾದನೆಯಲ್ಲಿ ದೇಶವು ವಿಶ್ವದ ಮುಂಚೂಣಿ ಸ್ಥಾನಕ್ಕೆ ಬಂದು ನಿಂತಿದ್ದಲ್ಲದೆ, ಅಮೆರಿಕಾದ ಮೇಲಿನ ಅವಲಂಬನೆಯನ್ನು ಕೊನೆಗೊಳಿಸಿತು.

ಸ್ವಾಮಿನಾಥನ್ ಅವರಿಗೆ ಏಷ್ಯಾದ ನೊಬೆಲ್ ಎಂದೇ ಪ್ರಸಿದ್ಧವಾಗಿರುವ ರೇಮನ್ ಮ್ಯಾಗ್ಸೆಸೆ ಪ್ರಶಸ್ತಿ 1971ರಲ್ಲಿ ದೊರೆತಿತ್ತು. ಭಾರತ ಸರ್ಕಾರ ಅವರಿಗೆ 1989 ರಲ್ಲಿ ಪದ್ಮ ವಿಭೂಷಣ ಪ್ರಶಸ್ತಿ ನೀಡಿ ಗೌರವಿಸಿತ್ತು.

 

ಹೆಚ್ಚು ಇಳುವರಿ ನೀಡುವ ಗೋಧಿ ಮತ್ತು ಭತ್ತದ ತಳಿಗಳ ಅಭಿವೃದ್ಧಿ ಮತ್ತು ಅವುಗಳ ಬಳಕೆಗೆ ಮುಂಚೂಣಿಯಲ್ಲಿ ನಿಂತು ಕೆಲಸ ಮಾಡಿದ್ದಕ್ಕಾಗಿ 1987 ರಲ್ಲಿ ಮೊದಲ ವಿಶ್ವ ಆಹಾರ ಪ್ರಶಸ್ತಿಯನ್ನು ಸ್ವಾಮಿನಾಥನ್ ಅವರಿಗೆ ಪ್ರಧಾನ ಮಾಡಲಾಯಿತು. 2007 ರಿಂದ 2013 ವರೆಗೂ ರಾಜ್ಯಸಭಾ ಸದಸ್ಯರಾಗಿಯೂ ಅವರು ಕಾರ್ಯನಿರ್ವಹಿಸಿದ್ದರು.

 

ನೆದರ್ ಲ್ಯಾಂಡ್ಸ್ ನ ವಾಹೆನಿಂಗನ್ ಕೃಷಿ ವಿಶ್ವವಿದ್ಯಾಲಯದಲ್ಲಿ 1949ರಲ್ಲಿ ಕೃಷಿ ಸಂಶೋಧನೆಯಲ್ಲಿ ವೃತ್ತಿ ಜೀವನ ಆರಂಭಿಸಿದ ಅವರು ಬಳಿಕ ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಲ್ಲಿ ಸಂಶೋಧನೆ ಮುಂದುವರಿಸಿದರು. 1952 ರಲ್ಲಿ ಕೇಂಬ್ರಿಜ್ ವಿವಿ ಡಾಕ್ಟರೇಟ್ ನೀಡಿತು.

 

1966 ರಲ್ಲಿ ಇಂದಿರಾ ಗಾಂಧಿ ಅವರು ಪ್ರಧಾನಿಯಾಗಿ ಪ್ರಧಾನಿಯಾದ ನಂತರದಲ್ಲಿ ಸ್ವಾಮಿನಾಥನ್ ಅವರಿಗೆ ತಮ್ಮ ಯೋಜನೆಗಳನ್ನು ಕಾರ್ಯರೂಪಕ್ಕೆ ತರಲು ಸಂಪೂರ್ಣ ಸ್ವಾತಂತ್ರ್ಯ ನೀಡಲಾಗಿತ್ತು. ಗೋಧಿಯ ಮಿಶ್ರ ತಳಿಗಳ ಅಭಿವೃದ್ಧಿಯಲ್ಲಿ ಅವರು ತಮ್ಮನ್ನು ತೊಡಗಿಸಿ ಕೊಂಡರು. ಈ ಕಾರಣದಿಂದಾಗಿ 15 ವರ್ಷಗಳ ಅವಧಿಯಲ್ಲಿ ಭಾರತಕ್ಕೆ ಗೋಧಿ ಉತ್ಪಾದನೆಯನ್ನು ಮೂರು ಪಟ್ಟು ಹೆಚ್ಚಿಸಲು ಸಾಧ್ಯವಾಯಿತು. 1979 ರಿಂದ 1980ರ ನಡುವೆ ಕೇಂದ್ರ ಕೃಷಿ ಸಚಿವಾಲಯದ ಪ್ರಧಾನ ಕಾರ್ಯದರ್ಶಿಯಾಗಿದ್ದ ಅವರು 1988 ರಲ್ಲಿ ಎಂ ಎಸ್ ಸ್ವಾಮಿನಾಥನ್ ರಿ

ಸರ್ಚ್ ಫೌಂಡೇಶನ್ ಸ್ಥಾಪಿಸಿದರು.

 

Leave a Comment