ದುಡಿಮೆ ಮತ್ತು ಆರ್ಥಿಕ ಜೀವನ
6. ನಿರುದ್ಯೋಗ ಸಮಸ್ಯೆಗೆ ಪರಿಹಾರೋಪಾಯಗಳನ್ನು ತಿಳಿಸಿ.
• ಜನಸಂಖ್ಯಾ ನಿಯಂತ್ರಣ ಕ್ರಮಗಳು
ಗುಡಿಕೈಗಾರಿಕೆಗೆ ಪ್ರೋತ್ಸಾಹ
• ಕೃಷಿ ಕ್ಷೇತ್ರದ ಅಭಿವೃದ್ಧಿ
ಕೈಗಾರಿಕಾ ಕ್ಷೇತ್ರದ ಅಭಿವೃದ್ಧಿ
• ಶೈಕ್ಷಣಿಕ ಸುಧಾರಣಾ ಯೋಜನೆಗಳು
ಪಂಚವಾರ್ಷಿಕ ಯೋಜನೆಗಳು
• ವೃತ್ತಿಪರ ಶಿಕ್ಷಣಕ್ಕೆ ಪ್ರೋತ್ಸಾಹ
• ಗ್ರಾಮೀಣಾಭಿವೃದ್ಧಿ ಯೋಜನೆಗಳು
• ಉದ್ಯೋಗ ಖಾತರಿ ಯೋಜನೆ
7. ಅಸಂಘಟಿತ ಕೆಲಸಗಾರರ ಸಮಸ್ಯೆಗಳನ್ನು ತಿಳಿಸಿ.
• ಅಸಂಘಟಿತ ಕೆಲಸಗಾರರು ಮಾಡುವ ದುಡಿಮೆಗೆ ಯಾವುದೇ ನಿಗದಿತ ನಿಯಮ, ಕಾಯ್ದೆಗಳಿರುವುದಿಲ್ಲ.
• ಇವರ ದುಡಿಮೆಗೆ ಕಡಿಮೆ ಕೂಲಿ ನೀಡಲಾಗುತ್ತದೆ.
• ಇವರಿಗೆ ಯಾವುದೇ ಉಚಿತ ವೈದ್ಯಕೀಯ ಸೌಲಭ್ಯಗಳಿರುವುದಿಲ್ಲ.
• ಇವರ ಕೆಲಸಕ್ಕೆ ಭದ್ರತೆ ಇಲ್ಲ
• ನಿಗದಿತ ವೇತನ, ವಿರಾಮ ವೇತನ, ನಿವೃತ್ತಿ ವೇತನ ಹಾಗೂ ಭತ್ಯೆಗಳ ಸೌಲಭ್ಯಗಳಿರುವುದಿಲ್ಲ,
• ಉದ್ಯೋಗಪತಿಗಳಿಂದ ಶೋಷಣೆಗೆ ಒಳಗಾಗುತ್ತಾರೆ
8. ಮಾನವನ ಎಲ್ಲ ಕ್ರಿಯೆಗಳು ಕೂಲಿಸಹಿತ ದುಡಿಮೆ ಎನಿಸಿಕೊಳ್ಳುವುದಿಲ್ಲ ಏಕೆ ?
• ದುಡಿಮೆಯು ಕೆಲವೊಮ್ಮೆ ಆರ್ಥಿಕ ಲಾಭ ಅಥವಾ ಪ್ರತಿಫಲ ಇಲ್ಲದ ಚಟುವಟಿಕೆ
• ಮನಃಸಂತೋಷದ ದೃಷ್ಟಿಯಿಂದ ಮಾನವನು ತೊಡಗುವ ಕ್ರಿಯೆಗಳೇ ಕೂಲಿ ರಹಿತ ದುಡಿಮೆ ಎನಿಸಿದೆ.
• ಉದಾಹರಣೆಗೆ – ಕಲಾಕಾರನೊಬ್ಬನು ಆತ್ಮ ಸಂತೋಷಕ್ಕಾಗಿ ಚಿತ್ರವೊಂದನ್ನು ಬಿಡಿಸುವ ಕಾರ್ಯದಲ್ಲಿ ತೊಡಗಿರುವುದು ಇತ್ಯಾದಿ.
• ಆದರೆ ಜಾತಿ ಮತ್ತು ವರ್ಣಭೇದದ ಸಮಾಜದಲ್ಲಿ ಕೆಳಜಾತಿ ಮತ್ತು ಕಪ್ಪು ಜನರಿಂದ ಒತ್ತಾಯ ಪೂರ್ವಕವಾಗಿ ಕೂಲಿ ರಹಿತ ದುಡಿಮೆ ಮಾಡಿಸಿಕೊಳ್ಳಲಾಗುತ್ತಿತ್ತು.