ಏಳನೇ ತರಗತಿ ಸಮಾಜ ವಿಜ್ಞಾನ ಭಾಗ-2 ಅಧ್ಯಾಯ 14 ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ (1857-58) ನೋಟ್ಸ್ ಅಥವಾ ಪ್ರಶ್ನೋತ್ತರಗಳು

 

ಅಧ್ಯಾಯ 14 ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ (1857-1858)

 

ಏಳನೇ ತರಗತಿ ಸಮಾಜ ವಿಜ್ಞಾನ ಭಾಗ-2 ಅಧ್ಯಾಯ 14 ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ (1857-58) ನೋಟ್ಸ್ ಅಥವಾ ಪ್ರಶ್ನೋತ್ತರಗಳು

 

ಒಂದು ಪದ ಅಥವಾ ವಾಕ್ಯದಲ್ಲಿ ಉತ್ತರಿಸಿರಿ.

 

 

1.1857ರ ಹೋರಾಟದ ತಕ್ಷಣದ ಕಾರಣ ಯಾವುದಾಗಿತ್ತು?

ಉತ್ತರ

1857ರಲ್ಲಿ ಒಂದು ಹೊಸ ಮಾದರಿಯ ಬಂದೂಕನ್ನು (ಎನ್ ಫೀಲ್ಡ್)ರೈಫಲ್ ಸೇನೆಯಲ್ಲಿ ತೊಡಗಿಸಿದ್ದು ಸಿಪಾಯಿ ದಂಗೆಗೆ ತಕ್ಷಣದ ಕಾರಣವಾಯಿತು.

 

2. ಮಂಗ ಪಾಂಡೆ ಯಾರು?

ಕೊಬ್ಬು ಸವರಿದ ಬಂಧೂಕನ್ನು ಬಳಸಲು ತಿರಸ್ಕರಿಸಿ, ಬಹಿರಂಗವಾಗಿಯೇ ಬ್ರಿಟಿಷ್ ಅಧಿಕಾರಿಯೊಬ್ಬನನ್ನು ಗುಂಡಿಕ್ಕಿ ಕೊಂದ ಬ್ಯಾರಕ್ ಪುರದ (ಬಂಗಾಲ) ಭಾರತೀಯ ಸಿಪಾಯಿಯೇ ಮಂಗಲ್ ಪಾಂಡೆ.

 

 

3. 1857ರ ಮಹಾ ದಂಗೆಯ ಯಾವುದಾದರೂ ಒಂದು ಪರಿಣಾಮವನ್ನು ತಿಳಿಸಿರಿ.

ಉತ್ತರ

1857ರ ಹೋರಾಟವು ಮುಂದೆ ಆಧುನಿಕ ರಾಷ್ಟ್ರೀಯ ಚಳುವಳಿಯ ಉದಯಕ್ಕೆ ನಾಂದಿ ಹಾಡಿತು.

 

4.1857ರ ಹೋರಾಟವನ್ನು ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮವೆಂದು ಮೊದಲು ಯಾರು ಕರೆದರು?

ಉತ್ತರ

1857ರ ಹೋರಾಟವನ್ನು ಭಾರತ ದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮವೆಂದು ಮೊದಲು ಹೇಳಿದವರು ‘ವಿನಾಯಕ ದಾಮೋದರ ಸಾವರ್ಕರ್’.

 

 

ಟಿಪ್ಪಣಿ ಬರೆಯಿರಿ .

 

 

1.ಸ್ವಾತಂತ್ರ್ಯ ಸಂಗ್ರಾಮದ ಕಾರಣಗಳು.

ರಾಜಕೀಯ ಕಾರಣಗಳು

ಬ್ರಿಟಿಷರ ದಿಗ್ವಿಜಯಗಳು ಮತ್ತು ಉದ್ದೇಶಪೂರ್ವಕ ಅಕ್ರಮಣ ನೀತಿ ಭಾರತದ ಆಳುವ ವರ್ಗ ಮತ್ತು ಜನತೆಯ ಭಾವನೆಗಳಿಗೆ ತೀವ್ರ ಆಘಾತವನ್ನು ಉಂಟು ಮಾಡಿ ಸ್ವಾತಂತ್ರ್ಯ ಸಂಗ್ರಾಮಕ್ಕೆ ನಾಂದಿ ಹಾಡಿತು.

ಆಡಳಿತಾತ್ಮಕ ಕಾರಣ

ಬ್ರಿಟಿಷರು ಎಲ್ಲಾ ನಾಗರಿಕ ಮತ್ತು ಸೈನಿಕ ಉನ್ನತ ಹುದ್ದೆಗಳನ್ನು ಯುರೋಪಿಯನ್ನರಿಗೆ ಮೀಸಲಿಟ್ಟು ಭಾರತೀಯ ಜನಸಾಮಾನ್ಯರಿಗೆ ಆಡಳಿತದಲ್ಲಿ ಕಿಂಚಿತ್ತು ಮಹತ್ವ ಕೊಡಲಿಲ್ಲ. ಹಾಗಾಗಿ ಭಾರತದ ಜನತೆ ದಂಗೆ ಏಳಲು ಕಾರಣವಾಯಿತು.

ಆರ್ಥಿಕ ಕಾರಣ

ಬ್ರಿಟಿಷರು ಭಾರತದ ಆರ್ಥಿಕ ಸಂಪನ್ಮೂಲಗಳು ಮತ್ತು ಸಂಪತ್ತನ್ನು ದೋಚಿದರು. ಇದರಿಂದ ಭಾರತದ ಪ್ರತಿಯೊಬ್ಬರು ಬಡತನವನ್ನು ಅನುಭವಿಸಬೇಕಾಯಿತು. ಇದು ಬ್ರಿಟಿಷರ ವಿರುದ್ಧ ದಂಗೆ ಏಳಲು ಕಾರಣವಾಯಿತು.

ಸಾಮಾಜಿಕ ಮತ್ತು ಧಾರ್ಮಿಕ ಕಾರಣ.

ಬ್ರಿಟಿಷರು ತಮ್ಮ ಜನಾಂಗೀಯ ಶ್ರೇಷ್ಠತೆಯ ಅಮಲಿನಲ್ಲಿದ್ದರು. ಅವರು ಭಾರತೀಯರನ್ನು ಕೀಳಾಗಿ ನೋಡುತ್ತಿದ್ದರು. ಹಂದಿ, ಕರಿ ಮನುಷ್ಯ ಎಂಬ ಪದಗಳಿಂದ ಸಂಬೋಧಿಸುತ್ತಿದ್ದರು. ಜೊತೆಗೆ ಕ್ರೈಸ್ತ ಮಿಷಿನರಿಗಳು ಭಾರತೀಯರನ್ನು ಕ್ರೈಸ್ತ ಧರ್ಮೀಯರನ್ನಾಗಿಸಲು ಪ್ರಯತ್ನ ಪಟ್ಟರು. ಈ ಕಾರಣಗಳಿಂದಾಗಿ ಭಾರತೀಯರು ಬ್ರಿಟಿಷರ ವಿರುದ್ಧ ದಂಗೆ ಎದ್ದರು.

ಸೈನಿಕ ಕಾರಣ

ಬ್ರಿಟಿಷ್ ಸೈನಿಕರಿಗೆ ಹೆಚ್ಚಿನ ಸಂಬಳ ಮತ್ತು ಭಾರತೀಯ ಸೈನಿಕರಿಗೆ ಕಡಿಮೆ ಸಂಬಳವಿತ್ತು. ಭಾರತೀಯ ಸೈನಿಕರಿಗೆ ಮುಂಬಡ್ತಿ ಅವಕಾಶ ಇರಲಿಲ್ಲ. ಮತ್ತು ಭಾರತೀಯ ಸೈನಿಕರನ್ನು ದೂರದ ಪ್ರದೇಶಗಳಿಗೆ ನೇಮಿಸಲಾಗುತ್ತಿತ್ತು. ಈ ತಾರತಮ್ಯದಿಂದ ಭಾರತೀಯ ಸೈನಿಕರು ದಂಗೆ ಎದ್ದರು.

ತಕ್ಷಣದ ಕಾರಣ

1857ರಲ್ಲಿ ಒಂದು ಹೊಸ ಮಾದರಿಯ ಬಂದೂಕನ್ನು ಪರಿಚಯಿಸಲಾಯಿತು. ಆ ಬಂದೂಕಿನಲ್ಲಿ ಹೊದಿಸಿದ ಹಲ್ಲಿನಿಂದ ಕಚ್ಚಿ ಹರಿಯಬೇಕಾದ ಕಾಗದಕ್ಕೆ ಹಂದಿ ಮತ್ತು ಗೋವಿನ ಕೊಬ್ಬು ಬಳಸಲಾಗಿದೆ ಎಂಬ ಸುದ್ದಿ ಸೈನಿಕರಲ್ಲಿ ಹಬ್ಬಿತು. ಇದರಿಂದ ಮುಸ್ಲಿಂ ಮತ್ತು ಹಿಂದೂ ಸಿಪಾಯಿಗಳ ಧಾರ್ಮಿಕ ಭಾವನೆಗೆ ಧಕ್ಕೆ ಉಂಟಾಗಿ ಸೈನಿಕರು ದಂಗೆ ಎದ್ದರು.

 

 

2.ಮಂಗಲ್ ಪಾಂಡೆ .

ಮಂಗಲ್ ಪಾಂಡೆ ಬ್ಯಾರಕ್ ಪುರದ (ಬಂಗಾಲ) ಭಾರತೀಯ ಸಿಪಾಯಿ. 1857ರಲ್ಲಿ ಇವನು ಕೊಬ್ಬು ಸವರಿದ ಬಂದೂಕನ್ನು ಬಳಸಲು ತಿರಸ್ಕರಿಸಿದನು. ಮತ್ತು ಬಹಿರಂಗವಾಗಿಯೇ ಬ್ರಿಟಿಷ್ ಅಧಿಕಾರಿಯೊಬ್ಬನನ್ನು ಗುಂಡಿಕ್ಕಿ ಕೊಂದನು. ನಂತರ ಅವನು ಸಹ ಕೊಲ್ಲಲ್ಪಟ್ಟನು. ಪ್ರಥಮ ಸ್ವಾತಂತ್ರ್ಯ ಸಂಗ್ರಾಮ (1857) ಪ್ರಾರಂಭವಾಗಲು ಮಂಗಲ್ ಪಾಂಡೆಯ ಈ ಧೈರ್ಯ ಮತ್ತು ಸಾಹಸ ಕಾರಣವಾಯಿತು.

 

 

3.ಝಾನ್ಸಿರಾಣಿ ಲಕ್ಷ್ಮೀಬಾಯಿ .

1857 ರಲ್ಲಿ ಸಿಪಾಯಿ ದಂಗೆ ನಡೆಯಿತು. ಝಾನ್ಸಿಯಲ್ಲಿ ಲಕ್ಷ್ಮಿ ಬಾಯಿ ಅವರ ನೇತೃತ್ವದಲ್ಲಿ ದಂಗೆ ನಡೆಯಿತು. ಇಡೀ ಮಹಿಳಾ ಕುಲವೇ ಹೆಮ್ಮೆಪಡುವ ಮತ್ತು ಭಾರತೀಯರು ನೆನಪಿಟ್ಟಿರುವ ಮಹಿಳೆಯ ಹೆಸರು ಝಾನ್ಸಿರಾಣಿ ಲಕ್ಷ್ಮೀಬಾಯಿ. ಇವರು ನವೆಂಬರ್ 19 1928ರಲ್ಲಿ ಕಾಶಿ (ವಾರಣಾಸಿ)ಯಲ್ಲಿ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದರು. ಬಾಲ್ಯದ ಹೆಸರು ಮಣಿಕರ್ಣಿಕ. ಲಕ್ಷ್ಮೀಬಾಯಿ ಚಿಕ್ಕಂದಿನಿಂದಲೇ ಕುದುರೆ ಸವಾರಿ, ಬಿಲ್ವಿದ್ಯೆ ಕತ್ತಿ ವರಸೆಗಳನ್ನು ಕಲಿತಿದ್ದಳು. 14 ವರ್ಷ ವಯಸ್ಸಿನಲ್ಲಿ ಝಾನ್ಸಿಯ ರಾಜ ಬಾಲಗಂಗಾಧರ ರಾವ್ ರೊಂದಿಗೆ ಬಾಲ್ಯ ವಿವಾಹವಾಯಿತು. ನಂತರ ಝಾನ್ಸಿಯ ರಾಣಿ ಲಕ್ಷ್ಮೀಬಾಯಿ ಎಂದು ಪ್ರಸಿದ್ಧಳಾದಳು. 1951 ರಲ್ಲಿ ಹುಟ್ಟಿದ ಗಂಡು ಮಗು 4 ತಿಂಗಳಿಗೆ ಮರಣ ಹೊಂದಿದ್ದು 1953ರಲ್ಲಿ ಗಂಡನನ್ನು ಕಳೆದುಕೊಂಡಳು. ದತ್ತು ಮಗನನ್ನು ಸ್ವೀಕರಿಸಲು ಸಿದ್ಧವಾದಳು. ಆದರೆ ದತ್ತು ಮಕ್ಕಳಿಗೆ ಹಕ್ಕಿಲ್ಲ ಎಂಬ ನೀತಿಯ ಪ್ರಕಾರ ಬ್ರಿಟಿಷರು ನಿರ್ಬಂಧ ಹೇರಿದರು. ತಾಂತ್ಯ ಟೋಪಿ, ರಘುನಾಥ ಮುಂತಾದ ನಾಯಕರ ಜೊತೆಗೂಡಿ ಬ್ರಿಟಿಷರ ವಿರುದ್ಧ ಸೈನ್ಯವನ್ನು ಕಟ್ಟಿ ಹೋರಾಡಿದಳು. 1857ರಲ್ಲಿ ಬ್ರಿಟಿಷರ ವಿರುದ್ಧ ಹೋರಾಡುತ್ತಾ ವೀರ ಮರಣವನ್ನು ಅಪ್ಪಿದಳು.

 

 

4.ಎರಡನೇ ಬಹಾದೂರ್ ಶಹ.

ಕೊನೆಯ ಮೊಘಲ್ ಚಕ್ರವರ್ತಿ ಬಹದ್ದೂರ್ ಶಾ ಜಾಫರ್ ಸಹ ಅಪ್ರತಿಮ ಸ್ವಾತಂತ್ರ್ಯ ಸೇನಾನಿ. 1857ರಲ್ಲಿ ನಡೆದ ದೇಶದ ಮೊದಲ ಸ್ವಾತಂತ್ರ್ಯ ಸಂಗ್ರಾಮದ ಜತೆ ಈ ಕೊನೆಯ ಮೊಘಲ್ ದೊರೆಯ ನಂಟಿದೆ.ಬಹದ್ದೂರ್ ಷಾ ಜಾಫರ್ ದೇಶದ ಹೆಸರಾಂತ ಆಡಳಿತಗಾರನಾಗಿದ್ದರೂ, ಸ್ವಾತಂತ್ರ್ಯ ಪಡೆಯುವ ಆಳವಾದ ಬಯಕೆ ಹೊಂದಿದ್ದ. 1857ರಲ್ಲಿ ಮೊದಲ ಸ್ವಾತಂತ್ರ್ಯ ಸಂಗ್ರಾಮದ ಪ್ರಮುಖ ವ್ಯಕ್ತಿಯಾಗಿ ಬ್ರಿಟಿಷರ ವಿರುದ್ಧ ಹೋರಾಟಕ್ಕಿಳಿದಿದ್ದನು.ಈ ಬಹದ್ದೂರ್‌ ಕಂಡ್ರೇ ಆಂಗ್ಲರು ನಡುಗುತ್ತಿದ್ದರು. ಆದರೆ, ಈ ದೊರೆಯ ಪುತ್ರರನ್ನು ಕೊಂದು ಈಗ ಮ್ಯಾನ್ಮಾರ್ ಎಂದು ಕರೆಯಲ್ಪಡುವ ಅಂದಿನ ಬರ್ಮಾಕ್ಕೆ ಗಡಿಪಾರು ಮಾಡಿದರು. 1775 ಅಕ್ಟೋಬರ್ 24ರಂದು ಜನಿಸಿದ ಬಹದ್ದೂರ್ ಷಾ ಜಾಫರ್ ಅವರಿಗೆ 82 ವರ್ಷ ವಯಸ್ಸಾಗಿತ್ತು. ಅವರು ಬ್ರಿಟಿಷರೊಂದಿಗೆ ಹೋರಾಡುವ ಬಂಡಾಯ ಸೈನಿಕರ ನಾಯಕತ್ವವನ್ನು ಒಪ್ಪಿಕೊಂಡರು. ಅವರ ತಂದೆ 2ನೇ ಅಕ್ಬರ್ ಷಾ ಮತ್ತು ತಾಯಿ ಲಾಲ್ಬಾಯಿ. ಅವರ ತಂದೆಯ ಮರಣದ ನಂತರ, 18ನೇ ಸೆಪ್ಟೆಂಬರ್, 1837ರಂದು ಜಾಫರ್ ಮೊಘಲ್ ಚಕ್ರವರ್ತಿಯಾದ. ಆ ಹೊತ್ತಿಗೆ, ಮೊಘಲ್ ಚಕ್ರವರ್ತಿ ನಾಮಮಾತ್ರದ ಚಕ್ರವರ್ತಿಯಾಗಿ ಉಳಿದಿದ್ದರು.ಮೀರತ್‌ನ ಸೈನಿಕರು ದಂಗೆಯ ನಂತರ ಆತನನ್ನು ತಮ್ಮ ನಾಯಕನನ್ನಾಗಿ ಆರಿಸಿಕೊಂಡರು. ಆದಾಗ್ಯೂ, ಬ್ರಿಟಿಷರ ರಾಜತಾಂತ್ರಿಕತೆಯಿಂದಾಗಿ, ಈ ಯುದ್ಧವು ಶೀಘ್ರವೇ ಕೊನೆಗೊಂಡಿತು.ಬ್ರಿಟಿಷರು ಜಾಫರ್ ವಿರುದ್ಧ ದೇಶದ್ರೋಹ ಮತ್ತು ಕೊಲೆ ಆರೋಪಗಳನ್ನು ಹೊರಿಸಿದರು.ಆತನನ್ನು ಅಪರಾಧಿ ಎಂದು ಘೋಷಿಸಲಾಯಿತು. ಬಳಿಕ ರಂಗೂನ್ಗೆ ಗಡಿಪಾರು ಮಾಡಲಾಯಿತು. 7 ನವೆಂಬರ್ 18

62 ರಂದು, ಅವರು ರಂಗೂನ್ ಜೈಲಿನಲ್ಲಿ ನಿಧನರಾದರು.

 

 

 

 

 

 

 

Leave a Comment