ಕಲ್ಲಿದ್ದಲು ಮತ್ತು ಪೆಟ್ರೋಲಿಯಂ,
8ನೇ ತರಗತಿ ವಿಜ್ಞಾನ ಅಧ್ಯಾಯ 5 ನೋಟ್ಸ್/ಪ್ರಶ್ನೆ ಉತ್ತರಗಳು
ಪಿಡಿಎಫ್ ಗಾಗಿ ಕೆಳಗಡೆ ಸ್ಕ್ರೋಲ್ ಮಾಡಿ
1. CNG ಮತ್ತು LPG ಗಳನ್ನು ಇಂಧನಗಳಾಗಿ ಬಳಸುವುದರ ಅನುಕೂಲತೆಗಳೇನು?
CNG ಮತ್ತು LPG ಅಥವಾ ನೈಸರ್ಗಿಕ ಅನಿಲವು ಒಂದು ಅತ್ಯಂತ ಪ್ರಮುಖ ಪಳೆಯುಳಿಕೆ ಇಂಧನಗಳು.ಏಕೆಂದರೆ, ಇವನ್ನು ಸುಲಭವಾಗಿ ಕೊಳವೆಗಳ ಮೂಲಕ ಸಾಗಿಸಬಹುದು.
CNG ಮತ್ತು LPG ಯನ್ನು ಶಕ್ತಿಯ ಉತ್ಪಾದನೆಗೆ ಉಪಯೋಗಿಸಲಾಗುತ್ತದೆ. ಕಡಿಮೆ ಮಲಿನಕಾರಿಯಾಗಿರುವುದರಿಂದ ಈಗ ಇವನ್ನು ಸಾರಿಗೆ ವಾಹನಗಳಿಗೆ ಇಂಧನಗಳಾಗಿ ಉಪಯೋಗಿಸಲಾಗುತ್ತಿದೆ. ಇದೊಂದು ಪರಿಶುದ್ಧ ಇಂಧನವಾಗಿದೆ.
CNG ಮತ್ತು LPG ಗಳ ಅತಿದೊಡ್ಡ ಅನುಕೂಲವೆಂದರೆ ಇದನ್ನು ಕೊಳವೆಗಳ ಮೂಲಕ ಸರಬರಾಜು ಮಾಡಿ ಮನೆಗಳಲ್ಲಿ ಮತ್ತು ಕಾರ್ಖಾನೆಗಳಲ್ಲಿ ನೇರವಾಗಿ ಉರಿಸಬಹುದು.
2. ರಸ್ತೆಗಳ ಮೇಲ್ಮೈ ನಿರ್ಮಾಣದಲ್ಲಿ ಉಪಯೋಗಿಸುವ ಪೆಟ್ರೋಲಿಯಂ ಉತ್ಪನ್ನವನ್ನು ಹೆಸರಿಸಿ.
ಉತ್ತರ
ಬಿಟುಮೆನ್—ರಸ್ತೆಗಳ ಮೇಲ್ಮೈ ನಿರ್ಮಾಣದಲ್ಲಿ ಉಪಯೋಗಿಸುವ ಪೆಟ್ರೋಲಿಯಂ ಉತ್ಪನ್ನ.
3. ಸತ್ತ ಸಸ್ಯರಾಶಿಯಿಂದ ಕಲ್ಲಿದ್ದಲು ಹೇಗೆ ಉಂಟಾಗುತ್ತದೆ ಎನ್ನುವುದನ್ನು ವಿವರಿಸಿ. ಈ ಪ್ರಕ್ರಿಯೆಯನ್ನು ಏನೆಂದು ಕರೆಯುತ್ತಾರೆ?
ಸುಮಾರು 300 ಮಿಲಿಯನ್ ವರ್ಷಗಳ ಹಿಂದೆ ಭೂಮಿಯು ತಗ್ಗಾದ ತೇವಾಂಶದಿಂದ ಕೂಡಿದ ಪ್ರದೇಶಗಳಲ್ಲಿ ದಟ್ಟವಾದ ಅರಣ್ಯಗಳನ್ನು ಹೊಂದಿತ್ತು. ಪ್ರವಾಹದಂತಹ ನೈಸರ್ಗಿಕ ಪ್ರಕ್ರಿಯೆಗಳಿಂದ ಈ ಅರಣ್ಯಗಳು ಮಣ್ಣಿನ ಅಡಿಯಲ್ಲಿ ಹೂತು ಹೋದವು. ಅವುಗಳ ಮೇಲೆ ಹೆಚ್ಚು ಮಣ್ಣು ಸಂಗ್ರಹವಾದಂತೆ, ಅವು ಸಂಪೀಡನೆಗೊಳಗಾದವು. ಅವು ಹೆಚ್ಚು ಹೆಚ್ಚು ಆಳಕ್ಕೆ ಹೂತುಹೋಗುತ್ತಿದ್ದಂತೇ ತಾಪವೂ ಹೆಚ್ಚಾಯಿತು. ಸತ್ತ ಸಸ್ಯಗಳು ಹೆಚ್ಚಿನ ಒತ್ತಡ ಮತ್ತು ಹೆಚ್ಚಿನ ತಾಪದಲ್ಲಿ, ನಿಧಾನವಾಗಿ ಕಲ್ಲಿದ್ದಲಾಗಿ ಪರಿವರ್ತನೆಗೊಂಡವು.
ಕಲ್ಲಿದ್ದಲು ಪ್ರಮುಖವಾಗಿ ಕಾರ್ಬನ್ ಅನ್ನು ಹೊಂದಿರುವುದರಿಂದ, ಸತ್ತ ಸಸ್ಯವರ್ಗ ಕಲ್ಲಿದ್ದಲಾಗಿ ಪರಿವರ್ತನೆ ಹೊಂದುವ ನಿಧಾನಗತಿಯ ಪ್ರಕ್ರಿಯೆಯನ್ನು ಕಾರ್ಬನೀಕರಣ ಎನ್ನುವರು.
ಇದು ಸಸ್ಯಗಳ ಉಳಿಕೆಯಿಂದ ಉಂಟಾಗಿರುವುದರಿಂದ, ಕಲ್ಲಿದ್ದಲನ್ನು ಪಳೆಯುಳಿಕೆ ಇಂಧನ ಎಂದೂ ಕರೆಯುವರು.
4. ಬಿಟ್ಟ ಸ್ಥಳಗಳನ್ನು ಸೂಕ್ತ ಪದಗಳಿಂದ ತುಂಬಿ.
(a)ಕಲ್ಲಿದ್ದಲು ಮತ್ತು ಪೆಟ್ರೋಲಿಯಂಗಳು ಪಳೆಯುಳಿಕೆ ಇಂಧನಗಳು.
(b) ಪೆಟ್ರೋಲಿಯಂನ ವಿವಿಧ ಘಟಕಗಳನ್ನು ಬೇರ್ಪಡಿಸುವ ಪ್ರಕ್ರಿಯೆಯನ್ನು ಶುದ್ಧೀಕರಣ ಎನ್ನುವರು.
(c) ಅತ್ಯಂತ ಕಡಿಮೆ ಮಾಲಿನ್ಯ ಉಂಟುಮಾಡುವ ವಾಹನ ಇಂಧನ ನೈಸರ್ಗಿಕ ಅನಿಲ.
5. ಕೆಳಗಿನ ಹೇಳಿಕೆಗಳ ಮುಂದೆ ಸರಿ/ತಪ್ಪು ಗುರುತಿಸಿ,
(೩) ಪಳೆಯುಳಿಕೆ ಇಂಧನಗಳನ್ನು ಪ್ರಯೋಗಶಾಲೆಯಲ್ಲಿ ತಯಾರಿಸಬಹುದು. [ತಪ್ಪು]
(b) CNG ಯು ಪೆಟ್ರೋಲ್ ಗಿಂತ ಹೆಚ್ಚು ಮಾಲಿನ್ಯ ಉಂಟುಮಾಡುವ ಇಂಧನವಾಗಿದೆ.. [ತಪ್ಪು]
(c) ಕೋಕ್ ಕಾರ್ಬನ್ ಬಹುತೇಕ ಶುದ್ಧ ರೂಪವಾಗಿದೆ. [ಸರಿ]
(d) ಕಲ್ಲಿದ್ದಲು ಅನಿಲ ಆನೇಕ ವಸ್ತುಗಳ ಮಿಶ್ರಣವಾಗಿದೆ. . [ತಪ್ಪು]
(e) ಸೀಮೆಎಣ್ಣೆ ಒಂದು ಪಳೆಯುಳಿಕೆ ಇಂಧನವಲ್ಲ [ತಪ್ಪು]
6. ಪಳೆಯುಳಿಕೆ ಇಂಧನಗಳು ಏಕೆ ಬರಿದಾಗುವ ನೈಸರ್ಗಿಕ ಸಂಪನ್ಮೂಲಗಳು ಎನ್ನುವುದನ್ನು ವಿವರಿಸಿ.
ಕಲ್ಲಿದ್ದಲು ಮತ್ತು ಪೆಟ್ರೋಲಿಯಂಗಳು ಪಳೆಯುಳಿಕೆ ಇಂಧನಗಳು ಎಂದು ನಮಗೆ ತಿಳಿದಿದೆ. ಸತ್ತ ಜೀವಿಗಳು ಈ ಇಂಧನಗಳಾಗಿ ಪರಿವರ್ತನೆಗೊಳ್ಳಲು ಅನೇಕ ಮಿಲಿಯನ್ ವರ್ಷಗಳೇ ಬೇಕಾಗುತ್ತವೆ. ಇನ್ನೊಂದೆಡೆಯಲ್ಲಿ ನಮಗೆ ತಿಳಿದಿರುವ ಹಾಗೆ ಇವುಗಳ ಸಂಗ್ರಹ ಇನ್ನು ಕೆಲವು ನೂರು ವರ್ಷಗಳಲ್ಲಿ ಮುಗಿದು ಹೋಗುತ್ತದೆ.
ಸತ್ತ ಜೀವಿಗಳಿಂದ ಕಲ್ಲಿದ್ದಲು, ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲಗಳನ್ನು ಪ್ರಯೋಗಾಲಯದಲ್ಲಿ ತಯಾರಿಸಲು ಸಾಧ್ಯವಿಲ್ಲ. ಏಕೆಂದರೆ ಅವುಗಳ ಉಂಟಾಗುವಿಕೆ ಪ್ರಕ್ರಿಯೆ ತುಂಬಾ ನಿಧಾನ ಗತಿಯದು ಮತ್ತು ಅವುಗಳ ಉಂಟಾಗುವಿಕೆಗೆ ಬೇಕಾದ ನಿಬಂಧನೆಗಳನ್ನು ಪ್ರಯೋಗಾಲಯದಲ್ಲಿ ಸೃಷ್ಟಿಸಲು ಸಾಧ್ಯವಿಲ್ಲ.
ಈ ಮೇಲಿನ ಕಾರಣಗಳಿಂದ ಪಳೆಯುಳಿಕೆ ಇಂಧನಗಳನ್ನು ಬರಿದಾಗುವ ನೈಸರ್ಗಿಕ ಸಂಪನ್ಮೂಲಗಳು ಎನ್ನುವರು.
7. ಕೋಕ್ ಲಕ್ಷಣಗಳು ಮತ್ತು ಉಪಯೋಗಗಳನ್ನು ವಿವರಿಸಿ.
ಕಲ್ಲಿದ್ದಲನ್ನು ಕೈಗಾರಿಕೆಗಳಲ್ಲಿ ಸಂಸ್ಕರಿಸಿ ಕೋಕ್ ನಂತಹ ಉಪಯುಕ್ತ ಉತ್ಪನ್ನವನ್ನು ಪಡೆಯಲಾಗುತ್ತದೆ.
ಕೋಕ್ ಒಂದು ಕಠಿಣವಾದ ಮತ್ತು ರಂಧ್ರಯುಕ್ತವಾದ ಕಪ್ಪು ವಸ್ತು. ಇದು ಕಾರ್ಬನ್‌ನ ಬಹುತೇಕ ಶುದ್ಧ ರೂಪ. ಉಕ್ಕಿನ ಉತ್ಪಾದನೆ ಮತ್ತು ಅನೇಕ ಲೋಹಗಳ ಉದ್ಧರಣೆಯಲ್ಲಿ ಕೋಕ್‌ಅನ್ನು ಉಪಯೋಗಿಸುತ್ತಾರೆ.
8. ಪೆಟ್ರೋಲಿಯಂ ಉಂಟಾಗುವ ಪ್ರಕ್ರಿಯೆಯನ್ನು ವಿವರಿಸಿ.
ಸಮುದ್ರದಲ್ಲಿ ವಾಸಿಸುವ ಜೀವಿಗಳಿಂದ ಪೆಟ್ರೋಲಿಯಂ ಉಂಟಾಗಿದೆ. ಈ ಜೀವಿಗಳು ಸತ್ತಾಗ ಅವುಗಳ ದೇಹಗಳು ಸಮುದ್ರದ ತಳವನ್ನು ಸೇರುತ್ತವೆ ಮತ್ತು ಮರಳು ಮತ್ತು ಜೇಡಿ ಮಣ್ಣಿನ ಪದರಗಳಿಂದ ಆವರಿಸಲ್ಪಡುತ್ತವೆ, ಮಿಲಿಯನ್‌ಗಟ್ಟಲೆ ವರ್ಷಗಳಲ್ಲಿ, ಗಾಳಿಯ ಅನುಪಸ್ಥಿತಿ, ಹೆಚ್ಚಿನ ತಾಪ ಮತ್ತು ಹೆಚ್ಚಿನ ಒತ್ತಡ, ಸತ್ತ ಜೀವಿಗಳನ್ನು ಪೆಟ್ರೋಲಿಯಂ ಆಗಿ ಪರಿವರ್ತಿಸಿವೆ.
9, ಈ ಕೆಳಗಿನ ಕೋಷ್ಟಕವು 1991 – 1997 ರವರೆಗೆ ಭಾರತದಲ್ಲಿನ ಒಟ್ಟು ಶಕ್ತಿಯ ಕೊರತೆಯನ್ನು ತೋರಿಸುತ್ತದೆ. ಈ ದತ್ತಾಂಶವನ್ನು ನಕ್ಷೆಯ ರೂಪದಲ್ಲಿ ತೋರಿಸಿ ವಾರ್ಷಿಕ ಕೊರತೆಯ ಶೇಕಡಾವಾರನ್ನು Y ಅಕ್ಷದ ಮೇಲೆ ಮತ್ತು ವರ್ಷವನ್ನು X- ಅಕ್ಷದ ಮೇಲೆ ಬಿಡಿಸಿ, –
ಎಂಟನೇ ತರಗತಿ ವಿಜ್ಞಾನ ಅಧ್ಯಾಯ 5 ಪ್ರಶ್ನೋತ್ತರಗಳು ಕಲ್ಲಿದ್ದಲು ಮತ್ತು ಪೆಟ್ರೋಲಿಯಂಕಲ್ಲಿದ್ದಲು ಮತ್ತು ಪೆಟ್ರೋಲಿಯಂ