7ನೇ ತರಗತಿ ಕನ್ನಡ ಪಾಠ 1 ಪುಟ್ಟಜ್ಜಿ ಪುಟ್ಟಜ್ಜಿ ಕತೆ ಹೇಳು ನೋಟ್ಸ್ /ಪ್ರಶ್ನೋತ್ತರಗಳು

7ನೇ ತರಗತಿ ಕನ್ನಡ ಪಾಠ 1 ಪುಟ್ಟಜ್ಜಿ ಪುಟ್ಟಜ್ಜಿ ಕತೆ ಹೇಳು ನೋಟ್ಸ್ /ಪ್ರಶ್ನೋತ್ತರಗಳು

 

ಪುಟ್ಟಜ್ಜಿ ಪುಟ್ಟಜ್ಜಿ ಕತೆ ಹೇಳು ಪಾಠದ ಪ್ರಶೋತ್ತರಗಳು

 

ಪುಟ್ಟಜ್ಜಿ ಪುಟ್ಟಜ್ಜಿ ಕತೆ ಹೇಳು

 

ಪುಟ್ಟಜ್ಜಿ ಪುಟ್ಟಜ್ಜಿ ಕತೆ

 

ಪುಟ್ಟಜ್ಜಿ ಪುಟ್ಟಜ್ಜಿ ಕತೆ ಹೇಳು ನೋಟ್ಸ್

 

ಪುಟ್ಟಜ್ಜಿ ಪುಟ್ಟಜ್ಜಿ ಕತೆ ಹೇಳು ಪಾಠ

 

ಪುಟ್ಟಜ್ಜಿ ಪುಟ್ಟಜ್ಜಿ ಕತೆ ಹೇಳು ಕೊಶನ್ ಆನ್ಸರ್

 

ಪುಟ್ಟಜ್ಜಿ ಪುಟ್ಟಜ್ಜಿ ಕತೆ ಹೇಳು ಪ್ರಶ್ನೆ ಉತ್ತರ

 

ಪುಟ್ಟಜ್ಜಿ ಪುಟ್ಟಜ್ಜಿ ಕಥೆಗಳು ಪ್ರಶೋತ್ತರ

 

ಕೊಟ್ಟಿರುವ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ.

೧.ಪುಟ್ಟಜ್ಜಿಯ ಬಳಿ ಹುಡುಗ ಯಾವ ಕಥೆ ಹೇಳಬೇಕೆಂದು ಕೇಳಿದನು?

ಉತ್ತರ

ಪುಟ್ಟಜ್ಜಿ ಬಳಿ ಹುಡುಗ ಹಾಡ್ಗತೆ ಹೇಳಬೇಕೆಂದು ಕೇಳಿದನು.

 

೨.ಯುವಕ ಮನೆಯ ಮುಂದೆ ಏನು ಮಾಡಿದನು?

ಉತ್ತರ

ಯುವಕ ಮನೆಯ ಮುಂದೆ ತೋಟವನ್ನು ಮಾಡಿದನು.

 

೩.ಜಿಂಕೆಯ ಕುತ್ತಿಗೆಯಲ್ಲಿ ಏನಿತ್ತು?

ಉತ್ತರ

ಜಿಂಕೆಯ ಕುತ್ತಿಗೆಯಲ್ಲಿ ಗೆಜ್ಜೆ ಇತ್ತು.

 

ಹುಲಿ ಸೋತು ಏನು ಮಾಡಿತು?

ಉತ್ತರ

ಹುಲಿ ಸೋತು ಪಲಾಯನ ಮಾಡಿತು.

 

೪. ಯುವತಿ ಕರೆದುಕೊಂಡು ಹೋಗುತ್ತೇನೆ ಎಂದಾಗ ಚುಕ್ಕಿ ಏನು ಮಾಡಿತು?

ಉತ್ತರ

ಯುವತಿ ಕರೆದುಕೊಂಡು ಹೋಗುತ್ತೇನೆ ಎಂದಾಗ, ಚುಕ್ಕಿ ಹೋಗಿ ಆ ಯುವಕನ ಮನೆಯೊಳಗೆ ಅವಿತುಕೊಂಡಿತು.

 

೫. ಹಳ್ಳದ ದಂಡೆಯ ಮೇಲಿನ ಊರು ಏನಾಯಿತು?

ಉತ್ತರ

ಹಳ್ಳದ ದಂಡೆಯ ಮೇಲಿನ ಊರು ಬೆಳೆಯಿತು.

 

ಕೊಟ್ಟಿರುವ ಪ್ರಶ್ನೆಗಳಿಗೆ ಎರಡು-ಮೂರು ವಾಕ್ಯಗಳಲ್ಲಿ ಉತ್ತರಿಸಿ.

 

೧. ಹಳ್ಳ ಹರಿದು ಊರ ಜನರನ್ನು ಏನು ಮಾಡಿದೆ?

ಉತ್ತರ

ಹಳ್ಳಹರಿದು ಊರ ಜನರನ್ನು ಪೋಷಿಸಿದೆ ಮತ್ತು ಊರಿಗೆ ಸೊಬಗು ತಂದು ಕೊಟ್ಟಿದೆ. ಊರಿನಲ್ಲಿ ಎಲ್ಲಾ ಕಡೆಗೆ ಹಸಿರು ಬೆಳೆಯಲಿಕ್ಕೆ ಕಾರಣವಾಗಿದೆ.

 

೨. ಯುವಕ ಹಳ್ಳದ ಬಳಿಗೆ ಬಂದು ಏನು ಮಾಡಿದನು?

ಉತ್ತರ

ಹಳ್ಳದ ಬಳಿಗೆ ಬಂದು, ಯುವಕ ಅಲ್ಲಿಯ ಪ್ರಕೃತಿಯ ಸೊಬಗನ್ನು ನೋಡಿ ಮನಸೋತು, ಅಲ್ಲಿ ಉಳಿಯುವ ಯೋಚನೆ ಮಾಡಿದನು. ಹಾಗೂ ಮನೆಯನ್ನು ಕಟ್ಟಿದ. ಮನೆಯ ಮುಂದೆ ಒಂದು ತೋಟ ಮಾಡಿದ. ಅದರಲ್ಲಿ ತನಗೆ ಏನು ಬೇಕು ಅದನ್ನು ಬೆಳೆಸಿದನು.

 

೩. ಹುಲಿ ಮತ್ತು ಯುವಕನ ನಡುವೆ ನಡೆದ ಸಂಭಾಷಣೆ ಏನು?

ಉತ್ತರ

ಹುಲಿ ಮತ್ತು ಯುವಕನ ನಡುವೆ ನಡೆದ ಸಂಭಾಷಣೆ ಏನೆಂದರೆ,

ಹುಲಿ :-“ಏಯ್, ಯುವಕ ಈ ಜಿಂಕೆ ನನ್ನ ಆಹಾರ. ನೀನು ಇದಕ್ಕೆ ರಕ್ಷಣೆ ನೀಡಿದರೆ, ಅದು ಅರಣ್ಯ ನಿಯಮಕ್ಕೆ ವಿರೋಧವಾಗುತ್ತದೆ. ಜಿಂಕೆಯನ್ನು ಬಿಟ್ಟು ಕೊಡು”, ಎಂದಿತು.

ಯುವಕ :- “ಇದು ಅರಣ್ಯದ ಜಿಂಕೆಯಲ್ಲ .ಯಾರೋ ಸಾಕಿದ ಪ್ರಾಣಿ . ಇದರ ಕುತ್ತಿಗೆಯಲ್ಲಿ ಗೆಜ್ಜೆ ಇದೆ. ಅರಣ್ಯದ ಪ್ರಾಣಿಯನ್ನು ಕೊಂದು ತಿನ್ನಲು ನಿನಗೆ ಅಧಿಕಾರವಿದೆ. ಆದರೆ ಹೀಗೆ ಯಾರೋ ಸಾಕಿದ ಪ್ರಾಣಿಯನ್ನು ಕೊಲ್ಲಲು ನಿನಗೆ ಅಧಿಕಾರವಿಲ್ಲ. ನಾನು ಇದನ್ನು ಬಿಟ್ಟುಕೊಡುವುದಿಲ್ಲ” ಎಂದನು.

 

೪. ಜಿಂಕೆಯನ್ನು ನೋಡಿದ ಯುವತಿ ಏನು ಮಾಡಿದಳು?

ಉತ್ತರ

ಜಿಂಕೆಯನ್ನು ನೋಡಿದ ಯುವತಿ ಅದನ್ನು ತಬ್ಬಿಕೊಂಡಳು. ಮತ್ತು ಜಿಂಕೆಯ ಮುಖಕ್ಕೆ ಮುಖ ತಾಗಿಸಿ ಅಳುತ್ತಿದ್ದಳು.

 

೫. ಯುವಕ ಚುಕ್ಕಿಯ ಬಗೆಗೆ ಯುವತಿಗೆ ಏನು ಹೇಳಿದನು?

ಉತ್ತರ

ಯುವಕ ಚುಕ್ಕಿಯ ಬಗೆಗೆ ಯುವತಿಗೆ ಅದನ್ನು ಹುಲಿಯಿಂದ ರಕ್ಷಿಸಿದ ಬಗೆಯನ್ನು ,ತನಗೂ ಹುಲಿಗೂ ನಡೆದ ಹೋರಾಟದಲ್ಲಿ ತನಗಾದ ಗಾಯಗಳನ್ನು ತೋರಿಸಿದನು. ಮತ್ತು ಚುಕ್ಕಿಯು ಕಾಡಿನಲ್ಲಿ ಮದ್ದು ಮಾಡಿದ್ದನ್ನು ಹೇಳಿದನು.

 

ಈ ವಾಕ್ಯಗಳನ್ನು ಯಾರು ಯಾರಿಗೆ ಹೇಳಿದರು ಎಂಬುದನ್ನು ಬರೆಯಿರಿ

 

೧. ಯಾವುದಾದರೂ ಒಂದು ಹಾಡ್ಗತೆ ಹೇಳು.

ಉತ್ತರ

ಆಯ್ಕೆ:- ಈ ವಾಕ್ಯವನ್ನು ಡಾಕ್ಟರ್ ಡಿಸೋಜಾ ರವರು ಬರೆದಿರುವ ಪುಟ್ಟಜ್ಜಿ ಪುಟ್ಟಜ್ಜಿ ಕತೆ ಹೇಳು ಎಂಬ ಪಾಠದಿಂದ ಆರಿಸಲಾಗಿದೆ.

ಮಾತು:- ಈ ಮಾತನ್ನು ಹುಡುಗ ಪುಟ್ಟಜ್ಜಿಗೆ ಹೇಳಿದನು.

ಸಂದರ್ಭ :-ಪುಟ್ಟಜ್ಜಿ ಹುಡುಗನ ಆಸೆಯಂತೆ ಕಥೆ ಹೇಳಲು ಪ್ರಾರಂಭಿಸಿ ಮೊದಲು ಯಾವ ಕಥೆ ಹೇಳಬೇಕೆಂದು ಕೇಳಿದಾಗ ಹುಡುಗನು ಈ ಮೇಲಿನಂತೆ ಹೇಳಿದ್ದಾನೆ.

 

೨. ಹೇ ಯುವಕ ಈ ಜಿಂಕೆ ನನ್ನ ಆಹಾರ.

ಉತ್ತರ

ಆಯ್ಕೆ:- ಈ ವಾಕ್ಯವನ್ನು ಡಾಕ್ಟರ್ ನಾರ್ಬಟ್ ಡಿಸೋಜಾ ರವರು ಬರೆದಿರುವ ಪುಟ್ಟಜ್ಜಿ ಪುಟ್ಟಜ್ಜಿ ಕತೆ ಹೇಳು ಎಂಬ ಪಾಠದಿಂದ ಆರಿಸಿಕೊಳ್ಳಲಾಗಿದೆ.

ಮಾತು:- ಈ ಮಾತನ್ನು ಹುಲಿಯು ಯುವಕನಿಗೆ ಹೇಳಿತು.

ಸಂದರ್ಭ :-ಹುಲಿಯು ತಾನು ಬೆನ್ನತ್ತಿ ಬಂದ ಜಿಂಕೆಗೆ ಯುವಕ ರಕ್ಷಣೆ ನೀಡಿದ್ದನ್ನು ಕಂಡು ಹುಲಿ ಸಿಟ್ಟಿನಿಂದ ಈ ಮಾತನ್ನು ಹೇಳಿತು.

 

೩. ಇದು ನಾವು ಸಾಕಿಕೊಂಡ ಜಿಂಕೆ.

ಉತ್ತರ

ಆಯ್ಕೆ:- ಈ ವಾಕ್ಯವನ್ನು ಡಾಕ್ಟರ್ ನಾರ್ಬಟ್ ಡಿಸೋಜಾ ರವರು ಬರೆದಿರುವ ಪುಟ್ಟಜ್ಜಿ ಪುಟ್ಟಜ್ಜಿ ಕತೆ ಹೇಳು ಎಂಬ ಪಾಠದಿಂದ ಆರಿಸಲಾಗಿದೆ

ಮಾತು :-ಈ ಮಾತನ್ನು ಯುವತಿ ಯುವಕನಿಗೆ ಹೇಳಿದಳು

ಸಂದರ್ಭ:- ಯುವತಿ ತಾನು ಕಳೆದುಕೊಂಡಿದ್ದ ತನ್ನ ಪ್ರೀತಿಯ ಜಿಂಕೆ ಸಿಕ್ಕಾಗ ಅಲ್ಲಿಯೇ ಇದ್ದ ಯುವಕನಿಗೆ ಈ ಮೇಲಿನ ಮಾತನ್ನು ಹೇಳಿದಳು

 

೪. ನಾನು ಚುಕ್ಕಿಯನ್ನು ಬಿಟ್ಟು ಇರಲಾರೆ

ಉತ್ತರ

ಆಯ್ಕೆ ಈ ವಾಕ್ಯವನ್ನು ಡಾಕ್ಟರ್ ನಾರ್ಬಟ್ ಡಿಸೋಜಾ ರವರು ಬರೆದಿರುವ ಪುಟ್ಟಜ್ಜಿ ಪುಟ್ಟಜ್ಜಿ ಕತೆ ಹೇಳು ಎಂಬ ಪಾಠದಿಂದ ಆರಿಸಲಾಗಿದೆ ಮಾತು ಈ ಮಾತನ್ನು ಯುವಕ ಯುವತಿಗೆ ಹೇಳಿದನು ಸಂದರ್ಭ ಯುವಕ ಚುಕ್ಕಿಯ ಬಗ್ಗೆ ಹಾಗೂ ಹುಲಿಗೂ ತನಗೂ ನಡೆದ ಹೋರಾಟದ ಬಗ್ಗೆ ಹೇಳುವ ಸಂದರ್ಭದಲ್ಲಿ ಇವತ್ತಿಗೆ ಈ ಮೇಲಿನಂತೆ ಹೇಳಿದ್ದಾನೆ.

 

ಕೆಳಗೆ ನೀಡಿರುವ ಸೂಚನೆಯಂತೆ ಉತ್ತರ ಬರೆಯಿರಿ.

 

೧. ಈ ಪಾಠದಲ್ಲಿ ಬಂದಿರುವ ಪ್ರಾಣಿಗಳ ಹೆಸರನ್ನು ಪಟ್ಟಿಮಾಡಿ .

ಉತ್ತರ

ಈ ಪಾಠದಲ್ಲಿ ಬಂದಿರುವ ಪ್ರಾಣಿಗಳ ಹೆಸರೇನು ಎಂದರೆ ಹುಲಿ ,ಜಿಂಕೆ, ಚಿರತೆ, ಸಿಂಹ ಮುಂತಾದವು.

 

೨.ಈ ಪಾಠದಲ್ಲಿ ಬಂದಿರುವ ವ್ಯಕ್ತಿಗಳ ಹೆಸರನ್ನು ಪಟ್ಟಿಮಾಡಿ.

ಉತ್ತರ

ಈ ಪಾಠದಲ್ಲಿ ಬಂದಿರುವ ವ್ಯಕ್ತಿಗಳ ಹೆಸರೇನೆಂದರೆ ಯುವಕ ,ಯುವತಿ, ಪುಟ್ಟಜ್ಜಿ, ಹುಡುಗ.

 

೩. ಅಜ್ಜಿ ಮತ್ತು ಕತೆ ಹೇಳುವ ಹುಡುಗನ ಸಂಭಾಷಣೆ ಬರೆಯಿರಿ.

ಉತ್ತರ

ಹುಡುಗ :-“ಪುಟ್ಟಜ್ಜಿ, ಪುಟ್ಟಜ್ಜಿ ಕತೆ ಹೇಳುತ್ತೀಯಾ?

ಪುಟ್ಟಜ್ಜಿ :-“ಬಾ ಮಗ ಹೇಳ್ತೀನಿ, ಯಾವ ಕಥೆ ಹೇಳಲಿ? ಹುಡುಗ:-” ಯಾವುದಾದರೂ ಒಂದು ಹಾಡ್ಗತೆ ಹೇಳು.”

 

೪. ಯುವಕ ಮತ್ತು ಯುವತಿಯ ನಡುವೆ ನಡೆದ ಸಂಭಾಷಣೆ ಬರೆಯಿರಿ

ಉತ್ತರ

ಯುವತಿ:- “ಚಿಕ್ಕಂದಿನಿಂದ ಚುಕ್ಕಿ ನಮ್ಮ ಮನೆಯಲ್ಲಿಯೇ ದೊಡ್ಡದಾಗಿದೆ. ನಾನು ಚುಕ್ಕಿಯನ್ನು ಬಿಟ್ಟು ಇರಲಾರೆ.”

ಯುವಕ:- “ನಾನು ಅದನ್ನು ಬಿಟ್ಟು ಇರಲಾರೆ. ಹುಲಿಯ ಬಾಯಿಂದ ಅದನ್ನು ಕಾಪಾಡಿದ್ದೇನೆ. ಈಗ ನಿನಗೆ ಇದನ್ನು ಕೊಡಲಾರೆ.”

ಯುವತಿ :-“ಹಾಗಾದರೆ ನಾನು ಇಲ್ಲಿಯೇ ಇರುತ್ತೇನೆ ಚುಕ್ಕಿಯ ಜೊತೆಯಲ್ಲಿ.”

 

ಹೊಂದಿಸಿ ಬರೆಯಿರಿ

 

ಪುಟ್ಟಜ್ಜಿ ———–ಕಥೆ

ಕಾಡು—————– ಹುಲಿ ಜಿಂಕೆ ಕಾಡುಕೋಣ

ಚುಕ್ಕಿ ————–ಜಿಂಕೆ

ಮದ್ದು ————–ಔಷಧ ,ಸೊಪ್ಪು ಸದೆ, ಬೇರು ಹಳ್ಳದ ದಂಡೆ ———ಊರು ಬೆಳೆಯಿತು

ಜಗಳ —————-ಹುಲಿ ಯುವಕ

 

ಕೆಳಗೆ ಹಲವು ಜೀವಿಗಳ ಹೆಸರುಗಳನ್ನು ನೀಡಲಾಗಿದೆ ಇವುಗಳನ್ನು ಸಾಕು ಪ್ರಾಣಿಗಳು ಮತ್ತು ಕಾಡು ಪ್ರಾಣಿಗಳು ಎಂದು ವಿಂಗಡಿಸಿ ಪ್ರತ್ಯೇಕ ಪಟ್ಟಿ ಮಾಡಿ

ಹುಲಿ ,ಕತ್ತೆ ,ಎಮ್ಮೆ, ಹಾಡು ,ಮೇಕೆ, ಹಂದಿ, ಕರಡಿ, ಜಿಂಕೆ, ನಾಯಿ, ಕಾಡುಕೋಣ, ಬೆಕ್ಕು ,ಜಿರಾಫೆ ,ಮಂಗ, ಸಿಂಹ, ಘೇಂಡಾಮೃಗ ,ಚಿರತೆ ,ಎತ್ತು ,ಸಾರಂಗ, ಕೋಳಿ ,ಆನೆ

 

ಕಾಡು ಪ್ರಾಣಿಗಳು:- ಹುಲಿ, ಸಿಂಹ ,ಚಿರತೆ ,ಕಾಡುಕೋಣ, ಕತ್ತೆ ,ಘೇಂಡಾಮೃಗ, ಕರಡಿ ,ಆನೆ ,ಜಿರಾಫೆ ,ಜಿಂಕೆ, ಮಂಗ.

 

 

ಸಾಕು ಪ್ರಾಣಿಗಳು:- ಬೆಕ್ಕು ,ಕತ್ತೆ ,ಎತ್ತು ,ಹಂದಿ, ಎಮ್ಮೆ, ಆಡು, ನಾಯಿ ,ಕೋಳಿ ,ಮೇಕೆ.

 

ಮೇಲಿನ ಎಲ್ಲಾ ಪ್ರಾಣಿಗಳ ಹೆಸರನ್ನು ಆಕಾರಾದಿಯಾಗಿ ಬರೆಯಿರಿ.

 

ಆಡು, ಆನೆ ,ಎತ್ತು ,ಎಮ್ಮೆ,ಕರಡಿ, ಕತ್ತೆ, ಕಾಡುಕೋಣ, ಕೋಳಿ, ಘೇಂಡಾಮೃಗ, ಚಿರತೆ, ಜಿರಾಫೆ ,ನಾಯಿ, ಬೆಕ್ಕು, ಮಂಗ, ಮೇಕೆ, ಸಾರಂಗ, ಸಿಂಹ, ಹಂದಿ ,ಹುಲಿ

 

puttajji puttajji kathe helu question and answer

 

puttajji puttajji kathe helu kannada lesson

 

puttajji puttajji kathe helu

 

puttajji puttajji kathe helu kannada lesson question answer

 

puttajji puttajji kathegalu

 

puttajji puttajji kathe helu kannada lesson explanation in english

 

puttajji puttajji kathe helu kannada story

 

puttajji puttajji kathe helu kannada lesson notes

 

puttajji puttajji kathe helu kannada lesson plan

 

puttajji puttajji kathe

 

 

Leave a Comment