ಭಾರತೀಯ ವೈಚಾರಿಕತೆ ಮತ್ತು ಭಕ್ತಿ ಪಂಥ 6th standard social science

 

 

6ನೇ ತರಗತಿ ಸಮಾಜ ವಿಜ್ಞಾನ ಭಾಗ-2

ಅಧ್ಯಾಯ 14

ಭಾರತೀಯ ವೈಚಾರಿಕತೆ ಮತ್ತು ಭಕ್ತಿ ಪಂಥ 6th

ನೋಟ್ಸ್ ಪ್ರಶ್ನೋತ್ತರಗಳು

 

 

ಗುಂಪುಗಳಲ್ಲಿ ಚರ್ಚಿಸಿ ಉತ್ತರಿಸಿ.

 

1. ಶಂಕರಚಾರ್ಯರು ಮಾಡಿರುವ ಸುಧಾರಣೆಗಳು ಯಾವುವು?

ಶಂಕರರು ಅಂದಿನ ಕಾಲದ ಹಿಂದೂ ಸಮಾಜದಲ್ಲಿ ಹಲವಾರು ಸುಧಾರಣೆಗಳನ್ನು ತಂದು ಜನರನ್ನು ಜ್ಞಾನಮಾರ್ಗದಲ್ಲಿ ನಡೆಸಿದರು.

ಶಂಕರರು ಬದರಿ (ಉತ್ತರಖಂಡ), ದ್ವಾರಕೆ (ಗುಜರಾತ್),ಪುರಿ(ಒಡಿಶ) ಮತ್ತು ಕರ್ನಾಟಕದ ಶೃಂಗೇರಿಯಲ್ಲಿ ಪೀಠಗಳನ್ನು ಸ್ಥಾಪಿಸಿದರು .ಈ ಪೀಠಗಳು ಭಾರತೀಯರನ್ನು ಭಾವನಾತ್ಮಕ ಹಾಗೂ ಧಾರ್ಮಿಕವಾಗಿ ಜೋಡಿಸುವ ಕೇಂದ್ರಗಳಾದವು.

ಶಂಕರರು ಅನೇಕ ಶಾಸ್ತ್ರ ಗ್ರಂಥಗಳನ್ನು ಬರೆದರು. ಅವರ ಕೃತಿ ‘ಭಜಗೋವಿಂದಂ’ ಇಂದಿಗೂ ಜನಪ್ರಿಯವಾಗಿದೆ. ಶಂಕರರು ತಮ್ಮ 32 ವರ್ಷಗಳ ಜೀವಿತಕಾಲದೊಳಗೆ ಇಷ್ಟೆಲ್ಲಾ ಸಾಧಿಸಿದ್ದು ಅಚ್ಚರಿಯ ಸಂಗತಿಯಾಗಿದೆ.

2. ರಾಮಾನುಜಾಚಾರ್ಯರು ಯಾವ ಸಾಮಾಜಿಕ ಸುಧಾರಣೆಗಳನ್ನು ಮಾಡಿದರು?

ಉತ್ತರ:

ರಾಮಾನುಜರ ಸುಧಾರಣೆಗಳು:

ರಾಮಾನುಜರು ಜಾತಿ ಸಾಮರಸ್ಯವನ್ನು ಪ್ರೋತ್ಸಾಹಿಸಿದರು.

ರಾಮಾನುಜರು ಮೇಲುಕೋಟೆ ಮತ್ತು ದಕ್ಷಿಣ ಭಾರತದಲ್ಲಿ ಅನೇಕ ಭವ್ಯ ದೇವಾಲಯಗಳ ನಿರ್ಮಾಣಕ್ಕೆ ಕಾರಣರಾದರು.

 

ಭಾರತೀಯ ವೈಚಾರಿಕತೆ ಮತ್ತು ಭಕ್ತಿ ಪಂಥ 6th 

3. ಬಸವೇಶ್ವರರ ಚಿಂತನೆಗಳು ಯಾವುವು?

ಉತ್ತರ:

ಬಸವಣ್ಣನವರು ಜಾತೀಯತೆ, ಮೂರ್ತಿ ಪೂಜೆ, ಯಜ್ಞ ಯಾಗಾದಿಗಳನ್ನು ಖಂಡಿಸಿದರು. ಜಾತಿ ರಹಿತ ಮತ್ತು ವರ್ಗರಹಿತ ಸಮಾಜ ನಿರ್ಮಾಣಕ್ಕೆ ಪಣತೊಟ್ಟರು. ಕಾಯಕವೇ ಕೈಲಾಸ ಎಂಬುದನ್ನು ಬೋಧಿಸಿದರು. ಬಸವಣ್ಣನವರ ಗುರಿ ಜನರಲ್ಲಿ ದುಡಿಮೆಯ ಸಂಸ್ಕೃತಿ ಬೆಳೆಸುವುದಾಗಿತ್ತು.

 

4. ವಚನ ಸಾಹಿತ್ಯದ ಮಹತ್ವವೇನು? ಕೆಲವು ವಚನಕಾರರನ್ನು ಹೆಸರಿಸಿ.

ಉತ್ತರ:

ವಚನ ಒಂದು ವಿಶಿಷ್ಟ ಸಾಹಿತ್ಯ ಪ್ರಕಾರವಾಗಿದ್ದು, ಗದ್ಯದಂತೆ ಓದಲು ಪದ್ಯದಂತೆ ಹಾಡಲು ಬರುವ ಸಾಹಿತ್ಯವಾಗಿದೆ. ಇದು ಜನರು ಸುಲಭವಾಗಿ ಅರ್ಥ ಮಾಡಿಕೊಳ್ಳಲು ಸಹಾಯಕ. ವಚನಗಳ ಮೂಲಕ ವಚನಕಾರರು ಸಮಾಜದಲ್ಲಿ ಬೇರೂರಿರುವ ಜಾತೀಯತೆ, ಮೂರ್ತಿ ಪೂಜೆ,ಯಜ್ಞ ಯಾಗಾದಿಗಳು, ಮೂಢನಂಬಿಕೆಗಳನ್ನು ಖಂಡಿಸಿದರು. ಉತ್ತಮ ನೀತಿ ಮಾರ್ಗಗಳನ್ನು, ಭಕ್ತಿ ಮಾರ್ಗಗಳನ್ನು ಜನರಿಗೆ ಬೋಧಿಸಲಾಯಿತು.

ಬಸವಣ್ಣನವರು,ಜೇಡರ ದಾಸಿಮಯ್ಯ, ಅಲ್ಲಮಪ್ರಭು, ಚನ್ನಬಸವಣ್ಣ, ಅಕ್ಕಮಹಾದೇವಿ ಇವರು ಕೆಲವು ವಚನಕಾರರು.

 

ಭಾರತೀಯ ವೈಚಾರಿಕತೆ ಮತ್ತು ಭಕ್ತಿ ಪಂಥ 6th 

ನೋಟ್ಸ್ ಪ್ರಶ್ನೋತ್ತರಗಳು

5.ಮಧ್ವಾಚಾರ್ಯರ ಕೊಡುಗೆಗಳು ಯಾವುವು?

ಉತ್ತರ:

ಮಧ್ವಾಚಾರ್ಯರು ದ್ವೈತ ಸಿದ್ದಾಂತಕ್ಕೆ ಸಂಬಂಧಿಸಿದಂತೆ ಅನೇಕ ಕೃತಿಗಳನ್ನು ಸಂಸ್ಕೃತದಲ್ಲಿ ರಚಿಸಿದರು. ಉಡುಪಿಯಲ್ಲಿ ಶ್ರೀ ಕೃಷ್ಣನ ಪೂಜೆಗೆಂದು ಅಷ್ಟ ಯತಿಗಳನ್ನು ನೇಮಿಸಿದರು. ಅವರು ದೇಶದ ಎಲ್ಲೆಡೆ ಸಂಚರಿಸಿ, ಸರಳವಾದ ಭಕ್ತಿ ಮಾರ್ಗವನ್ನು ಉಪದೇಶ ಮಾಡಿದರು.

 

 

6.ಭಕ್ತಿ ಸಂತರು ಏನನ್ನು ಬೋಧಿಸಿದರು ?

ಉತ್ತರ:

ಭಕ್ತಿ ಸಂತರು ಭಕ್ತಿ ಮಾರ್ಗವನ್ನು ಬೋಧಿಸಿದರು. ದೇವರ ದಯೆಯನ್ನು ಗಳಿಸಲು ಭಕ್ತಿಯೇ ದಾರಿ ಎಂದು ನಂಬಿದರು. ಸಮಾಜದಲ್ಲಿ ಸಾಮರಸ್ಯ ತಂದರಲ್ಲದೆ ಜನರನ್ನು ಸನ್ಮಾರ್ಗದಲ್ಲಿ ಮುನ್ನಡೆಸಿದರು. ಸಾಮಾಜಿಕ ಲೋಪದೋಷಗಳನ್ನು ಕೂಡ ಅವರು ತಪ್ಪದೇ ಎತ್ತಿ ತೋರಿಸಿದರು. ಕಂದಾಚಾರವನ್ನು ವಿರೋಧಿಸಿ ಖಂಡಿಸಿದರು. ಧರ್ಮವೆಂದರೆ ಪ್ರೇಮ ಹಾಗು ಮಾನವ ಸೇವೆ ಎಂದು ಸಾರಿದರು. ದೇವನೊಬ್ಬನೆ ಇರುವನಲ್ಲದೆ ಹಲವರಿಲ್ಲವೆಂದು ನುಡಿದರು. ಜನರ ಹೃದಯವನ್ನು ಬೆಸೆಯುವ ಕಾರ್ಯ ಮಾಡಿದರು.

 

 

7.ಗುರುನಾನಕರ ಹಾಡುಗಳನ್ನು ಏನೆಂದು ಕರೆಯುತ್ತಾರೆ?

ಉತ್ತರ:

ಗುರು ನಾನಕರ ಹಾಡುಗಳನ್ನು “ಜಪಜಿಗಳು” ಎಂದು ಕರೆಯುತ್ತಾರೆ.

ಭಾರತೀಯ ವೈಚಾರಿಕತೆ ಮತ್ತು ಭಕ್ತಿ ಪಂಥ 6th 

8.ಭಾರತದ ಪ್ರಮುಖ ಸೂಫಿ ಸಂತರು ಯಾರು?

ಉತ್ತರ:

ಭಾರತದ ಪ್ರಮುಖ ಸೂಫಿ ಸಂತರು ಎಂದರೆ: ನಿಜಾಮುದ್ದೀನ್ ಅಲಿಯಾ, ಮುಯ್ನುದ್ದೀನ್ ಚಿಸ್ತಿ, ಬಂದೇ ನವಾಜ್, ಸಲೀಂ ಚಿಸ್ತಿ, ಬಾಬಾ ಬುಡನ್, ಬುಡನ್ ಅಲ್ ದೀನ್

 

 

9. ಭಕ್ತಿ ಪಂಥದ ಪರಿಣಾಮಗಳನ್ನು ಹೇಳಿರಿ.

ಉತ್ತರ:

ಭಕ್ತಿ ಪಂಥದಿಂದ ಹಿಂದೂ ಮುಸ್ಲಿಂ ಸಾಮರಸ್ಯ ಸಾಧಿತವಾಯಿತು. ಭಕ್ತಿ ಸಂತರು, ಜನರಾಡುವ ಸ್ಥಳೀಯ ಭಾಷೆಯಲ್ಲಿ ಸಾಹಿತ್ಯ ರಚನೆ ಮಾಡಿರುವುದರಿಂದ ಭಾರತೀಯ ಭಾಷೆಗಳು ಶ್ರೀಮಂತಗೊಂಡವು.

 

 

10.ಸಂತರು ಯಾವ ಮಾರ್ಗವನ್ನು ಬೋಧಿಸಿದರು?

ಉತ್ತರ:

ಸಂತರು ಭಕ್ತಿ ಮಾರ್ಗವನ್ನು ಬೋಧಿಸಿದರು.

 

 

11.ಸಿಖರ ಪವಿತ್ರ ಗ್ರಂಥ ಯಾವುದು?

ಉತ್ತರ:

ಸಿಖರ ಪವಿತ್ರ ಗ್ರಂಥ “ಗ್ರಂಥ ಸಾಹಿಬ್”.

 

ಭಾರತೀಯ ವೈಚಾರಿಕತೆ ಮತ್ತು ಭಕ್ತಿ ಪಂಥ 6th 

ಚರ್ಚಿಸಿ.

 

 

1.ಭಕ್ತಿ ಸಂತರ ಬೋಧನೆಗಳ ಪ್ರಸ್ತುತತೆ.

ಭಕ್ತಿ ಸಂತರ ಬೋಧನೆಗಳು ಇಂದಿಗೂ ಪ್ರಸ್ತುತವಾಗಿವೆ. ಏಕೆಂದರೆ ಆಗಿನ ಸಮಾಜದಲ್ಲಿನ ಲೋಪ ದೋಷಗಳು ಇಂದಿಗೂ ಕೂಡ ಕಾಣುತ್ತಿವೆ. ಜಾತಿ ರಹಿತ ಮತ್ತು ವರ್ಗರಹಿತ ಸಮಾಜ ನಿರ್ಮಾಣ ಮಾಡಲು, ಭಕ್ತಿ ಸಂತರ ಬೋಧನೆಗಳು ಇಂದಿಗೂ ಬೇಕಾಗಿವೆ. ಜನರಲ್ಲಿ ಪ್ರೇಮ, ಸಹೋದರ ಭಾವ, ದಾನಶೀಲತೆ ಇವುಗಳನ್ನು ಬೆಳೆಸಬೇಕಾಗಿದೆ. ಮೇಲು-ಕೀಳು ಎಂಬ ಭೇದ ಭಾವವನ್ನು ಅಳಿಸಿ, ಸಮಾನತೆಯನ್ನು ಸಾರಲು ಭಕ್ತಿ ಪಂಥ ಇಂದಿಗೂ ಅವಶ್ಯಕತೆ ಇದೆ.

 

 

 

 

 

 

 

 

 

 

 

 

 

 

 

 

 

Leave a Comment