6ನೇ ತರಗತಿ ಗದ್ಯಭಾಗ 1 ದೊಡ್ಡವರ ದಾರಿ ನೋಟ್ಸ್/ ಪ್ರಶ್ನೋತ್ತರಗಳು

 

doddavara dari kannada notes

 

doddavara dari in kannada

 

doddavara dari kannada question and answer

 

doddavara dari pata

ದೊಡ್ಡವರ ದಾರಿ

ದೊಡ್ಡವರ ದಾರಿ ಪಾಠ

ದೊಡ್ಡವರ ದಾರಿ ಪಾಠದ ಸಾರಾಂಶ

ದೊಡ್ಡವರ ದಾರಿ ಕನ್ನಡ

ದೊಡ್ಡವರ ದಾರಿ ಆರನೇ ತರಗತಿ

ದೊಡ್ಡವರ ದಾರಿ ಕೊಶನ್ ಆನ್ಸ‌ರ್

ಪಾಠ ಒಂದು ದೊಡ್ಡವರ ದಾರಿ

part-1 ದೊಡ್ಡವರ ದಾರಿ

 

 

 

 

ಅ. ಆವರಣದಲ್ಲಿ ಕೊಟ್ಟಿರುವ ಪದಗಳಲ್ಲಿ ಸೂಕ್ತವಾದದನ್ನು ಆರಿಸಿ ಬಿಟ್ಟ ಸ್ಥಳ ಭರ್ತಿ ಮಾಡಿರಿ .

 

೧. ಮಕ್ಕಳಿಗೆ ತಮ್ಮ ತಪ್ಪಿನ ಅರಿವಾಗಬೇಕು ಎಂದೆನಿಸಿತು.

 

೨. ಪ್ರಸಾದರು ಅವರಿಗೆಲ್ಲ ಅಷ್ಟಷ್ಟು ಕಾಸು ಕೊಟ್ಟರು.

 

೩. ವಿದ್ಯಾರ್ಥಿಗಳಿಗೆ ಬುದ್ಧಿ ಕಲಿಸಲು ತಾವೇ ಒಂದು ದಾರಿ ಕಂಡುಕೊಂಡರು.

 

೪. ಒಂದಿಬ್ಬರು ಪಾಲಿಶ್ ಹಾಕಿಸಿಕೊಂಡು ಆಗಿತ್ತು.

 

ಆ. ಕೊಟ್ಟಿರುವ ಪದ ಬಳಸಿ ಸ್ವಂತ ವಾಕ್ಯ ರಚಿಸಿ.

 

೧. ರಾಷ್ಟ್ರಪತಿ:-ನಮ್ಮ ದೇಶದ ಈಗಿನ ರಾಷ್ಟ್ರಪತಿ ದ್ರೌಪದಿ ಮುರ್ಮು(2024).

 

೨. ಕಾಸು:-ಪ್ರತಿಯೊಬ್ಬರೂ ಕಾಸು ಸಂಪಾದಿಸಿ ತಮ್ಮ ಕಾಲ ಮೇಲೆ ತಾವು ನಿಲ್ಲಬೇಕು.

 

೩. ಶಿಸ್ತು:-ಶಿಸ್ತಿನ ಜೀವನ ನಡೆಸಿದರೆ ಆರೋಗ್ಯ ಚೆನ್ನಾಗಿರುತ್ತದೆ.

 

೪. ದಾರಿ :-ಒಳ್ಳೆಯ ದಾರಿಯು ನಮ್ಮನ್ನು ಒಳ್ಳೆಯವರನ್ನಾಗಿಸುತ್ತದೆ.

 

ಇ. ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿರಿ

 

೧. ರಾಜೇಂದ್ರ ಪ್ರಸಾದರು ತಾವು ಯಾರ ಸೇವಕ ಎಂದು ಹೇಳಿಕೊಳ್ಳುತ್ತಿದ್ದರು?

ಉತ್ತರ

ರಾಜೇಂದ್ರ ಪ್ರಸಾದರು ತಾವು ಜನರ ಸೇವಕ ಎಂದು ಹೇಳಿಕೊಳ್ಳುತ್ತಿದ್ದರು.

 

೨. ಪುಸ್ತಕದ ಪುಟಗಳನ್ನು ಹರಿದ ಮಕ್ಕಳಿಗೆ ಪ್ರಸಾದರು ಏನನ್ನು ಕೊಟ್ಟರು?

ಉತ್ತರ

ಪುಸ್ತಕದ ಪುಟಗಳನ್ನು ಹರಿದ ಮಕ್ಕಳಿಗೆ ಪ್ರಸಾದರು ಕಾಸನ್ನು ಕೊಟ್ಟರು.

 

೩. ಯಾವುದು ಒಳ್ಳೆಯ ಅಭ್ಯಾಸವಲ್ಲ ಎಂದು ಪ್ರಸಾದರು ಮಕ್ಕಳಿಗೆ ಹೇಳಿದರು?

ಉತ್ತರ

ಪುಸ್ತಕದ ಪುಟಗಳನ್ನು ಹರಿದು ಹಾಕುವುದು ಒಳ್ಳೆಯ ಅಭ್ಯಾಸವಲ್ಲ ,ಎಂದು ಪ್ರಸಾದರು ಮಕ್ಕಳಿಗೆ ತಿಳಿಸಿದರು

 

೪. ಜಾಮಿಯಾ ಮಿಲಿಯ ಎಲ್ಲಿದೆ?

ಉತ್ತರ: ಜಾಮಿಯಾ ಮಿಲಿಯಾ ದೆಹಲಿಯಲ್ಲಿದೆ.

 

೫. ಜಾಕೀರ್ ಹುಸೇನರು ವಿದ್ಯಾರ್ಥಿಗಳಿಗೆ ಬುದ್ಧಿ ಕಲಿಸಲು ಯಾವ ವೇಷ ಹಾಕಿದರು?

ಉತ್ತರ

ಜಾಕಿರ್ ಹುಸೇನರು ವಿದ್ಯಾರ್ಥಿಗಳಿಗೆ ಬುದ್ಧಿ ಕಲಿಸಲು ಬೂಟ್ ಪಾಲಿಶ್ ಹಾಕುವವನ ವೇಷ ಹಾಕಿದರು.

 

೬. ಕೆಳಗಿನ ವಾಕ್ಯಗಳನ್ನು ಯಾರು ಯಾರಿಗೆ ಹೇಳಿದರು?

 

೧. ” ನೋಡಿ ಮಕ್ಕಳೇ https://youtube.com/@technicalmohamed914?si=H2p92tQNklSEsvsQ ಜ್ಞಾನ ಭಂಡಾರ”.

ಉತ್ತರ

ಈ ಮೇಲಿನ ವಾಕ್ಯವನ್ನು ಡಾ. ರಾಜೇಂದ್ರ ಪ್ರಸಾದರು ಮಕ್ಕಳಿಗೆ ಹೇಳಿದರು.

 

೨. ” ತಾತ ನಾವು ಇನ್ನು ಮುಂದೆ ಎಂದೂ ಪುಸ್ತಕಗಳ ಪುಟಗಳನ್ನು ಹರಿಯುವುದಿಲ್ಲ”.

ಉತ್ತರ

ಈ ಮೇಲಿನ ವಾಕ್ಯವನ್ನು ಮಕ್ಕಳು ರಾಜೇಂದ್ರ ಪ್ರಸಾದರಿಗೆ ಹೇಳಿದರು.

 

ಉ. ಕೆಳಗಿನ ಪ್ರಶ್ನೆಗಳಿಗೆ ಮೂರು ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿರಿ.

 

೧. ರಾಜೇಂದ್ರ ಪ್ರಸಾದ್ ಅವರ ವ್ಯಕ್ತಿತ್ವವನ್ನು ವಿವರಿಸಿರಿ.

ಉತ್ತರ

ರಾಜೇಂದ್ರ ಪ್ರಸಾದ್ ರಾಷ್ಟ್ರಪತಿಗಳಂತಹ ಉನ್ನತ ಸ್ಥಾನಕ್ಕೇರಿದರು ಸರಳ ಜೀವನ ನಡೆಸಿದವರು ಅವರದು ಋಷಿ ಸದೃಶ ಜೀವನ ಅವರು ಕೋಪವನ್ನು ಹತ್ತಿಕ್ಕ ಬಲ್ಲವರಾಗಿದ್ದರು ಬಾಳಿನಲ್ಲಿ ಶಿಸ್ತು ಸಂಯಮ ಸಮಯ ಪಾಲನೆ ಇವುಗಳಿಗೆ ಭಾರೀ ಮಹತ್ವ ನೀಡುತ್ತಿದ್ದರು.

 

 

೨. ವಿದ್ಯಾರ್ಥಿಗಳಿಗೆ ಬುದ್ಧಿ ಕಲಿಸಲು ಜಾಕಿರ್ ಹುಸೇನ್ ಏನು ಮಾಡಿದರು?

ಉತ್ತರ

ವಿದ್ಯಾರ್ಥಿಗಳಿಗೆ ಬುದ್ಧಿ ಕಲಿಸಲು ಜಾಕಿರ್ ಹುಸೇನರು ಒಂದು ದಿನ ವಿಶ್ವವಿದ್ಯಾಲಯದ ಪ್ರವೇಶ ದ್ವಾರದಲ್ಲಿ ಒಬ್ಬ ಬೂಟ್ ಪಾಲಿಶ್ ಹಾಕುವವನ ವೇಷದಲ್ಲಿ ಕುಳಿತರು. ಮತ್ತು ಪಾಲಿಶ್ ಡಬ್ಬಿ, ಬ್ರಷ್ ಹಿಡಿದು, ಬಂದ ವಿದ್ಯಾರ್ಥಿಗಳಿಗೆ ಪಾಲಿಶ್ ಹಾಕಿದರು. ಇದನ್ನು ಕಂಡ ವಿದ್ಯಾರ್ಥಿಗಳು ತಮ್ಮ ವರ್ತನೆಗೆ ನಾಚಿ, ಅಂದಿನಿಂದ ನೀಟಾಗಿ ಬಟ್ಟೆ ಹಾಕಿಕೊಂಡು ಬೂಟುಗಳಿಗೆ ಪಾಲಿಶ್ ಹಾಕಿಕೊಂಡು ಕಾಲೇಜಿಗೆ ಬರತೊಡಗಿದರು.

 

ಊ. ವಚನ ಬದಲಿಸಿ ಬರೆಯಿರಿ.

 

೧.ಗಿಡ :-. ಗಿಡಗಳು

 

೨.ತಮ್ಮಂದಿರು:-. ತಮ್ಮ

 

೩. ಪತ್ರಗಳು :-. ಪತ್ರ

 

೪. ಮಗು:-. ಮಕ್ಕಳು

 

ಋ. ಪುಲ್ಲಿಂಗ ಅಥವಾ ಸ್ತ್ರೀಲಿಂಗ ರೂಪಕ್ಕೆ ಪರಿವರ್ತಿಸಿ ಬರೆಯಿರಿ

 

೧. ಅವನು: ಅವಳು

 

೨. ಇವಳು: ಇವನು

 

೩. ಗೌಡತಿ : ಗೌಡ

 

೪. ಶರಣ : ಶರಣೆ

 

ಎ. ಕೆಳಗಿನವುಗಳಿಗೆ ನಾಲ್ಕು ಉದಾಹರಣೆಗಳನ್ನು ಕೊಡಿರಿ

6ನೇ ತರಗತಿ ಗದ್ಯಭಾಗ 1

ದೊಡ್ಡವರ ದಾರಿ ನೋಟ್ಸ್/ ಪ್ರಶ್ನೋತ್ತರಗಳು

೧. ಅನ್ವರ್ಥನಾಮ ಅಗಸ , ಗೌಡ , ಆಳು, ಕುಂಬಾರ

 

೨.ರೂಢನಾಮ : ಮನೆ ,ಶಾಲೆ ,ಕುರ್ಚಿ, ಊರು

 

೩.ಅಂಕಿತನಾಮ: ರಾಜೇಂದ್ರ  ಪ್ರಸಾದ್, ಬೆಂಗಳೂರು, ನರೇಂದ್ರ ಮೋದಿ, ಬಸವರಾಜ ಬೊಮ್ಮಾಯಿ.

 

 

 

 

 

 

 

 

 

 

 

 

Leave a Comment