ಆ) ಕೊಟ್ಟಿರುವ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ:
1 ಅಮಾತ್ಯರು ಯಾವ ವಿಷಯದಲ್ಲಿ ನಿಪುಣರಾಗಿರಬೇಕು?
ಉತ್ತರ: ಅಮಾತ್ಯರು ರಾಜ್ಯಶಾಸ್ತ್ರ ವಿಷಯದಲ್ಲಿ ನಿಪುಣರಗಾಗಿ .
2) ರಾಜನು ಯಾವ ಕಾರ್ಯವನ್ನು ಕೂಡಲೇ ಆಚರಣೆಗೆ ತರಬೇಕು?
ಉತ್ತರ: ರಾಜನು ಮಂತ್ರಾಲೋಚನೆಯ ಕಾರ್ಯವನ್ನು ಕೂಡಲೇ ಆಚರಣೆಗೆ ತರಬೇಕು.
3. ಕಷ್ಟ ಕಾಲದಲ್ಲಿ ಸಹಾಯಕ್ಕೆ ನಿಲ್ಲುವವನು ಯಾರು?
ಉತ್ತರ: ಕಷ್ಟ ಕಾಲದಲ್ಲಿ ಸಹಾಯಕ್ಕೆ ನಿಲ್ಲುವವನು ಪಂಡಿತನು.
4 ರಾಜನಿಗೆ ಮಹತ್ತರವಾದ ಶ್ರೇಯಸ್ಸನ್ನು ತಂದುಕೊಡಬಲ್ಲವನು ಯಾರು?
ಉತ್ತರ: ರಾಜನಿಗೆ ಮಹತ್ತರವಾದ ಶ್ರೇಯಸ್ಸನ್ನು ತಂದುಕೊಡಬಲ್ಲವನು, ಮೇಧಾವಿಯೂ, ಶೂರನೂ ಕಾರ್ಯದಕ್ಷನ ರಾಜ್ಯಶಾಸ್ತ್ರವಿಶಾರದನೂ ಆದ ಸಚಿವನು.
೫. ಜನರು ಅರಸನನ್ನು ಹೇಗೆ ತಿರಸ್ಕರಿಸಬಹುದು?
ಉತ್ತರ: ಬಲತ್ಕಾರದಿಂದ ಕೆಲಸ ಮಾಡಿಸಿಕೊಂಡು ಶೋಷಿಸುವ ಯಜಮಾನರನ್ನು ದ್ವೇಷಿಸುವ ಆಳುಗಳಂತೆ ತಿರಸ್ಕರಿಸಬಹುದು.
6. ದೇಶಕ್ಕೆ ದೊಡ್ಡ ಗಂಡಾಂತರ ತರಬಲ್ಲವರು ಯಾರು?
ಉತ್ತರ: ದೇಶಕ್ಕೆ ದೊಡ್ಡ ಗಂಡಾಂತರ ತರಬಲ್ಲವರು ದೇಶಭಟ್ಟರು.
7. ಯಾರೊಡನೆ ಸಮಲೋಚಿಸುವುದು ರಾಜದೋಷ ಎಂದು ರಾಮನು ಹೇಳುತ್ತಾನೆ?
ಉತ್ತರ: ಅನುಭವವಿಲ್ಲದ ಅವಿವೇಕಿಗಳೊಡನೆ ಸಮಾಲೋಚಿಸುವುದು ರಾಜದೋಷ ಎಂದು ರಾಮನು ಹೇಳುತ್ತಾನೆ.
ಆ) ಕೊಟ್ಟಿರುವ ಪ್ರಶ್ನೆಗಳಿಗೆ ಐದಾರು ವಾಕ್ಯಗಳಲ್ಲಿ ಉತ್ತರಿಸಿ:
1 ಮಂತ್ರಾಲೋಚನೆಯನ್ನು ಹೇಗೆ ನಡೆಸಬೇಕೆಂದು ರಾಮನ ಅಭಿಪ್ರಾಯ?
ಉತ್ತರ: ರಾಜ್ಯವನ್ನು ಆಳತಕ್ಕವರಿಗೆ ಮಂತ್ರಾಲೋಚನೆಯೇ ಜಯಕ್ಕೆ ಮೂಲ ಕಾರಣವಾದದ್ದು. ರಾಜಶಾಸ್ತ್ರ ನಿಪುಣರಾದ ಅಮಾತ್ಯರು ಆ ಮಂತ್ರಾಲೋಚನೆಯನ್ನು ಗೋಪ್ಯವಾಗಿಟ್ಟಿರಬೇಕು. ನೀನು ನಿದ್ರಾವಶನಾಗದೆ ಯುಕ್ತ ಕಾಲದಲ್ಲಿ ಎಚ್ಚರಗೊಳ್ಳುತ್ತಿರಬೇಕು. ರಾತ್ರಿಯ ಕಡೆಯ ಜಾವದಲ್ಲಿದ್ದು ರಾಜನೀತಿಯ ಕರ್ತವ್ಯವನ್ನು ಪರ್ಯಾಲೋಚಿಸು ತಿರಬೇಕು. ನೀನೊಬ್ಬನೇ ಮಂತ್ರಾಲೋಚನೆ ಮಾಡಿ ನಿರ್ಣಯಕ್ಕೆ ಬರುವುದಿಲ್ಲವಷ್ಟೆ? ಅಥವಾ ಅಗತ್ಯಕ್ಕಿಂತ ಹೆಚ್ಚಿನ ಮಂದಿಯನ್ನು ವೃಥಾ ಸೇರಿಸಿ ಚರ್ಚಿಸುವುದಿಲ್ಲವಷ್ಟೆ?. ನಿನ್ನ ಮಂತ್ರಾಲೋಚನೆಯು ಕಾರ್ಯರೂಪಕ್ಕೆ ಬರುವುದರೊಳಗೇ ರಾಷ್ಟ್ರದಲ್ಲಿ ಬಹಿರಂಗವಾಗುವುದಿಲ್ಲವಷ್ಟೆ? ಅಲ್ಪ ಪ್ರಯತ್ನದಿಂದ ಬಹುಫಲವನ್ನು ಕೊಡತಕ್ಕ ಕಾರ್ಯವನ್ನು ಕೂಡಲೇ ಆಚರಣೆಗೆ ತರಬೇಕು. ಅದನ್ನು ಆಚರಣೆಗೆ ತರಲು ತಡ ಮಾಡಬಾರದು. ನೀನು ಆಚರಣೆಗೆ ತರಬೇಕೆಂದಿರುವ ಮಂತ್ರಾಲೋಚನೆಯು ಮೊದಲೇ ಸಾಮಂತರಾಜರಿಗೆ ತಿಳಿದಿರಬಾರದು. ಅದು ಸಾಮಂತರಿಗೆ ಗೊತ್ತಾಗುವಷ್ಟರಲ್ಲಿ ಪೂರ್ಣವಾಗಿ ನಡೆದು ಹೋಗಿರಬೇಕು. ಇಲ್ಲವೇ ಅರ್ಧದಷ್ಟಾದರೂ ಆಚರಣೆಯಲ್ಲಿ ಬಂದಿರಬೇಕು. ನೀನಾಗಲೀ ನಿನ್ನ ಮಂತ್ರಿಗಳಾಗಲೀ ನಡೆಸಿದ ಮಂತ್ರಾಲೋಚನೆಯು ಊಹೆಯಿಂದಲೂ ಯುಕ್ತಿಯಿಂದಲೂ ಜನರಿಗೆ ತಿಳಿದು ಬಹಿರಂಗವಾಗದಂತೆ ಎಚ್ಚರಿಕೆಯಲ್ಲಿ ಇರಬೇಕು. ಈ ರೀತಿಯಾಗಿ ಮಂತ್ರಾಲೋಚನೆಯನ್ನು ನಡೆಸಬೇಕೆಂದು ರಾಮನ ಅಭಿಪ್ರಾಯ.
2 ರಾಜ್ಯದ ಅಮಾತ್ಯರಲ್ಲಿ ಯಾವ ಗುಣಗಳಿರಬೇಕು?
ಉತ್ತರ: ಅಮಾತ್ಯರು ಲಂಚವನ್ನು ತೆಗೆದುಕೊಳ್ಳದವರೂ ಪ್ರಾಮಾಣ್ಯದ ವಿಷಯದಲ್ಲಿ ಸಂದೇಹಾತೀತರೂ ಆಗಿರಬೇಕು. ನೀನು ಒಂದು ವೇಳೆ ಪ್ರಜೆಗಳಿಗೆ ಉಗ್ರ ದಂಡನೆಯನ್ನು ವಿಧಿಸಿ ರಾಷ್ಟ್ರವನ್ನು ಉದ್ವೇಗಗೊಳಿಸಲು ತೊಡಗಿದರೆ ನಿನ್ನ ಮಂತ್ರಿಗಳು ಅದನ್ನು ಒಪ್ಪದೆ ನಿನ್ನನ್ನು ತಡೆದು ನಿಲ್ಲಿಸಲು ಮುಂದೆ ಬರಬೇಕು. ಈ ರೀತಿಯಾಗಿ ಅಮಾತ್ಯರ ಗುಣಗಳಿರಬೇಕು.
3. ಯಾವ ಮೂರು ವ್ಯಕ್ತಿಗಳನ್ನು ರಾಜನು ತ್ಯಜಿಸಬೇಕು? ಯಾಕೆ?
ಉತ್ತರ: ಉಪಾಯದಿಂದ ಹಣ ಕೀಳುವ ವೈದ್ಯನನ್ನು, ಒಡೆಯನನ್ನು ದೂಷಿಸುವ ಸೇವಕನನ್ನೂ ಖಜಾನೆಯ ಐಶ್ವರ್ಯದ ಮೇಲೆ ಕಣ್ಣಿಟ್ಟಿರುವ ಸೈನಿಕನನ್ನೂ ರಾಜನು ತ್ಯಜಿಸಬೇಕು. ಏಕೆಂದರೆ ಈ ವ್ಯಕ್ತಿಗಳ ಕುತಂತ್ರದಿಂದಲೇ ರಾಜ ವಿಪತ್ತಿನಲ್ಲಿ ಸಿಕ್ಕಿಹಾಕಿಕೊಳ್ಳುವುದು.
೩. ದೂತನು ಹೇಗಿರಬೇಕು?
ಉತ್ತರ: ದೂತನು ಕಾರ್ಯ ಸಮರ್ಥನೂ ಪ್ರಭಾವಶಾಲಿಯೂ ಆಗಿರಬೇಕು. ಹೇಳಿಕಳಿಸಿದ ಸಂದೇಶವನ್ನಷ್ಟೇ ತಿಳಿಸುವ ಸತ್ಯವಂತನಕ್ಕಾಗಿ. ವ್ಯಕ್ತಿ, ವಸ್ತುಗಳ ಮೌಲ್ಯವನ್ನು ಯೋಗ್ಯತೆಯನ್ನೂ ಸರಿಯಾಗಿ ಗುರುತಿಸಬಲ್ಲ ನಿಷ್ಣಾತನಾಗಿರಬೇಕು. ಶತ್ರು ಪಕ್ಷದಲ್ಲಿ ಮಂತ್ರಿಯೇ ಮೊದಲಾದ ಹದಿನೆಂಟು, ಇಲಾಖೆಗಳು ಹೇಗೆ ನಡೆಯುತ್ತಿವೆ ಎಂಬುದನ್ನು ಪರೀಕ್ಷಿಸಲು ಪ್ರತಿಯೊಬ್ಬರ ಮೇಲೆ ಮೂವರು ಗೂಢಚಾರರನ್ನು ನಿಯಮಿಸಬೇಕು. ಈ ರೀತಿಯಾಗಿ ದೂತನು ಇರಬೇಕು.
5. ಸೇವಕರ ವಿಷಯದಲ್ಲಿ ರಾಜನು ಹೇಗೆ ವರ್ತಿಸಬೇಕು?
ಉತ್ತರ: ರಾಜನು ಪ್ರತಿದಿನವೂ ಪ್ರಾತ: ಕಾಲದಲ್ಲೆದ್ದು ನಿನ್ನನ್ನು ಜನ ಮೆಚ್ಚುವ ರೀತಿಯಲ್ಲಿ ಸಿದ್ದಪಡಿಸಿಕೊಂಡು ಸಭಾಮಂಟಪದಲ್ಲಿ ಪ್ರಜೆಗಳಿಗೆ ದರ್ಶನವನ್ನು ಕೊಡುತ್ತಿರಬೇಕು. ಸೇವಕರೆಲ್ಲರೂ ನಿರ್ಭಯರಾಗಿ ಬಂದು ನಿನ್ನೆದುರಿಗೆ ನಿಲ್ಲುವಷ್ಟು ಸಲಿಗೆಯನ್ನು ಕೊಡಬಾರದು, ಜೊತೆಗೆ ಹತ್ತಿರವೇ ಸುಳಿಯದೆ ದೂರಕ್ಕೆ ಸರಿಯುವಂತೆ ಅಂಜಿಸಲೂಬಾರದು. ಅವರ ವಿಷಯದಲ್ಲಿ ಹೆಚ್ಚು ಸಲಿಗೆಯೂ ಸಲ್ಲದು; ಹೆಚ್ಚು ಅಂಜಿಸುವದೂ ಸಲ್ಲದು, ಅವರ ನಡುವೆ ರಾಜನು ಸೇವಕರ ವಿಷಯದಲ್ಲಿ ವರ್ತಿಸಬೇಕು.
6. ಖಜಾನೆಯನ್ನು ಹೇಗೆ ನಿಭಾಯಿಸಬೇಕೆಂದು ರಾಮನು ಹೇಳುತ್ತಾನೆ?
ಉತ್ತರ: ರಘು ವಂಶೋತ್ತಮನಾದ ನೀನು ವೃದ್ಧರಿಗೂ ತರುಣರಿಗೂ ಸ್ನೇಹಪರನಾಗಲು, ನಿನ್ನ ದುರ್ಗಗಳಲ್ಲಿ ಧನ ಧಾನ್ಯ ಜಲಗಳು ಸಮೃದ್ಧಿಯಾಗಿವೆಯೇ? ಅವು ಯಂತ್ರ ಯಂತ್ರಜ್ಞ ರಿಂದಲೂ ಶಿಲ್ಪಿಗಳು, ಆಯುಧಗಳು ಹಾಗೂ ಧನುರ್ಧಾರಿಗಳಾದ ಸೈನಿಕರಿಂದಲೂ ಪೂರ್ಣ ಪ್ರಮಾಣದಲ್ಲಿವೆಯೇ?. ನಿನ್ನ ಆದಾಯವು ಹೆಚ್ಚಿರಬೇಕು. ರಾಜ್ಯದ ಬೊಕ್ಕಸದಲ್ಲಿ ನೀನು ಸಂಗ್ರಹಿಸುವ ಸಂಪತ್ತೆಲ್ಲವೂ ರಾಜ್ಯದ ಅಭಿವೃದ್ದಿಯ ಕೆಲಸ ಕಾರ್ಯಗಳಿಗೆ ವಿನಿಯೋಗವಾಗುತ್ತಿರಬೇಕು. ಖಜಾನೆಯನ್ನು ಬರಿದುಗೊಳಿಸಬಾರದು, ಹಾಗೆಂದು ಅದನ್ನು ತುಳುಕುವಷ್ಟು ತುಂಬಿಸಿಕೊಳ್ಳಲು ಅನರ್ಥ, ಅನ್ಯಾಯಗಳ ಮಾರ್ಗವು ಹಿಡಿಯಬಾರದು ಎಂದು ಹೇಳುತ್ತಾನೆ.
ಈ) ಕೊಟ್ಟಿರುವ ಪ್ರಶ್ನೆಗಳಿಗೆ ಹತ್ತು ವಾಕ್ಯಗಳಲ್ಲಿ ಉತ್ತರಿಸಿ.
1 ರಾಜ್ಯಾಡಳಿತದ ವಿಷಯದಲ್ಲಿ ರಾಮನ ಉಪದೇಶವನ್ನು ಸಂಗ್ರಹವಾಗಿ ಬರೆಯಿರಿ.
ಉತ್ತರ: ಜಟಾಧಾರಿಯಾಗಿ ನಾರುಮಡಿಯನ್ನುಟ್ಟು ಕೈಜೋಡಿಸಿ, ನೆಲದ ಮೇಲೆ ಬಿದ್ದ ಭರತನನ್ನು ಶ್ರೀರಾಮನು ನೋಡಿದನು. ತೇಜಸ್ವಿಯಾದ ಆ ಭರತನು ಪ್ರಳಯ ಕಾಲದಲ್ಲಿ ಕೆಳಗೆ ಬಿದ್ದ ಸೂರ್ಯನಂತೆ ಕಾಣಿಸಿದನು. ಭರತನ ಮುಖವು ಬಾಡಿ ಬಣ್ಣಗೆಟ್ಟಿತ್ತು. ದೇಹವು ಸೊರಗಿ ಕೃಶವಾಗಿತ್ತು. ಅವನು ತನ್ನ ತಮ್ಮನಾದ ಭರತನು ಎಂಬುದು ಶ್ರೀರಾಮನಿಗೆ ಥಟ್ಟನೆ ತಿಳಿಯಲಿಲ್ಲ. ಆ ಮೇಲೆ ಗುರುತು ಹಿಡಿದು ಎದ್ದು ಒಂದು ಕೈ ಹಿಡಿದುಕೊಂಡನು. ಆತನನ್ನು ಪ್ರೀತಿಯಿಂದ ಮಾತಾಡಿಸಿ: ಪಕ್ಕದಲ್ಲಿ ಕುಳ್ಳಿರಿಸಿಕೊಂಡು ಸಾವಧಾನವಾಗಿ ಕುಶಲಪ್ರಶ್ನೆಗಳನ್ನು ಕೇಳಿದನು.ಪ್ರಾರಂಭದ ಮಾತು ಕತೆಗಳೆಲ್ಲ ಮುಗಿದ ಬಳಿಕ ಅಯೋಧ್ಯೆಯಲ್ಲಿ ಭರತನ ಆಡಳಿತವು ಹೇಗೆ ನಡೆಯುತ್ತಿದೆ ಎಂದು ತಿಳಿಯಲು ಶ್ರೀರಾಮನು ಹಲವು ಪ್ರಶ್ನೆಗಳನ್ನು ಈ ಮುಂದಿನ ಭಾರತ ರಾಜ್ಯ ಆಳತಕ್ಕವರಿಗೆ ಮಂತ್ರಾಲೋಚನೆಯೇ ಜಯಕ್ಕೆ ಮೂಲ ಕಾರಣವಾಗಬೇಕು. ರಾಜಶಾಸ್ತ್ರ ನಿಪುಣರಾದ ಅಮಾತ್ಯರು . ನೀನು ನಿದ್ರಾವಶನಾಗದೆ ‘ಯುಕ್ತ ಕಾಲದಲ್ಲಿ ಎಚ್ಚರಗೊಳ್ಳುತ್ತಿರಬೇಕು. ರಾತ್ರಿಯ ಕಡೆಯ ಜಾವದಲ್ಲಿ ಎದ್ದು ರಾಜನೀತಿಯ ಕರ್ತವ್ಯವನ್ನು ಪರ್ಯಾಲೋಚಿಸುತ್ತಿರಬೇಕು. ನೀನೊಬ್ಬನೇ ಮಂತ್ರಾಲೋಚನೆ ಮಾಡಿ ನಿರ್ಣಯಕ್ಕೆ ಬರಬಾರದು. ಅಗತ್ಯಕ್ಕಿಂತ ಹೆಚ್ಚಿನ ಜನರನ್ನು ವೃಥಾ ಸೇರಿಸಿ ಚರ್ಚಿಸಬಾರದು. ನಿನ್ನ ಮಂತ್ರಾಲೋಚನೆಯು ಕಾರ್ಯರೂಪಕ್ಕೆ ಬರುವುದರೊಳಗೇ, ರಾಷ್ಟ್ರದಲ್ಲಿ ಬಹಿರಂಗವಾಗಕೂಡದು. ಅಲ್ಪ ಪ್ರಯತ್ನದಿಂದ ಬಹುಫಲವನ್ನು ಕೊಡತಕ್ಕ ಕಾರ್ಯವನ್ನು ಕೂಡಲೇ ಆಚರಣೆಗೆ ತರಬೇಕು. ಅತ್ಯುಚ್ಚವಾದ ಅಧಿಕಾರದಲ್ಲಿ ಶ್ರೇಷ್ಠ ಅಮಾತ್ಯರನ್ನು ಪರೀಕ್ಷಿಸಿ ನಿಯೋಜಿಸಬೇಕು.ಉಪಾಯದಿಂದ ಹಣ ಕೀಳುವ ವೈದ್ಯನನ್ನು, ಒಡೆಯನನ್ನು ದೂಷಿಸುವ ಸೇವಕನನ್ನೂ, ಖಜಾನೆಯ ಐಶ್ವರ್ಯದ ಮೇಲೆ ಕಣ್ಣಿಟ್ಟಿರುವ ಸೈನಿಕನನ್ನೂ ರಾಜನು ತ್ಯಜಿಸಬೇಕು. ಅವರಿಗೆ ಉಗ್ರ ಶಿಕ್ಷೆ ಕೊಡಬೇಕು. ಇಲ್ಲದಿದ್ದರೆ ಆತ ಈ ವ್ಯಕ್ತಿಗಳ ಕುತಂತ್ರದಿಂದಲೇ ವಿಪತ್ತಿನಲ್ಲಿ ಸಿಕ್ಕಿಕೊಳ್ಳಬಹುದು. ಭರತ, ನಿನ್ನ ಸತ್ಕಾರದಿಂದ ಸಂತೃಪ್ತನೂ ಶೂರನೂ ಸೇನೆಯನ್ನು ವ್ಯವಸ್ಥೆಗೊಳಿಸುವುದರ ಚಟುವಟಿಕೆಯಲ್ಲಿ ಸಮರ್ಥನೂ ಆದವನನ್ನು ಸೇನಾಪತಿಯನ್ನಾಗಿ ನೇಮಿಸಬೇಕು. ಮಾಡುವುದು. ಪ್ರಾಜ್ಞರಾದ ಸಜ್ಜನರೊಡನೆ ಸೇರದಿರುವುದು, ಸೋಮಾರಿತನ, ಪಂಚೇಂದ್ರಿಯಗಳಿಗೆ ಅಧೀನನಾಗಿ ಇಂದ್ರಿಯ ಚಾಪಲ್ಯದಲ್ಲಿ ಮುಳುಗುವುದು, ಮಂತ್ರಿಗಳೊಡನೆ ಸಮಾಲೋಚಿಸದೆ ರಾಜ್ಯ ಕಾರ್ಯ ಗಳಲ್ಲಿ ತಾನೊಬ್ಬನೇ ನಿರ್ಧಾರವನ್ನು ತೆಗೆದುಕೊಳ್ಳುವುದು, ಅನುಭವವಿಲ್ಲದ ಅವಿವೇಕಿಗಳೊಡನೆ ಸಮಾಲೋಚಿಸುವುದು, ನಿಶ್ಚಯಿಸಿದ ಕಾರ್ಯಗಳನ್ನು ಆರಂಭ ಮಾಡದಿರುವುದು, ಮಂತ್ರಾಲೋಚನೆಯನ್ನು ರಹಸ್ಯವಾಗಿಡದೆ ಬಹಿರಂಗ ಮಾಡುವುದು. ಮಂಗಳಕರವಾದ ಶುಭಕಾರ್ಯಗಳನ್ನು ಮಾಡದಿರುವುದು, ಎಲ್ಲಾ ಶತ್ರುಗಳ ಮೇಲು ಏಕಕಾಲದಲ್ಲಿ ಯುದ್ಧ ಆರಂಭ–ಇಂತಹ ರಾಜ ದೋಷಗಳಿಗೆ ನೀನು ಅವಕಾಶ ಮಾಡಿಕೊಡಬೇಡ. ಯಾವುದೇ ಪ್ರಮುಖ ನಿರ್ಣಯಗಳನ್ನು ಕೈಗೊಳ್ಳುವಾಗ ನಾಲ್ಕು ಜನ ಪ್ರಾಜ್ಞ ಮಂತ್ರಿಗಳೊಂದಿಗೆ ಒಟ್ಟಿಗೆ ಕುಳಿತು ಚರ್ಚಿಸಬೇಕು. ಆನಂತರ ಒಬ್ಬೊಬ್ಬರನ್ನಾಗಿ ಕರೆಸಿ ಅವರ ಅಭಿಪ್ರಾಯಗಳನ್ನು ತಿಳಿದುಕೊಳ್ಳಬೇಕು. ಪೂರ್ವಿಕರ ವ್ಯಕ್ತಿತ್ವದ ಅತ್ಯುತ್ತಮ ಅಂಶಗಳನ್ನು ರಾಜನು ಅಳವಡಿಸಿಕೊಳ್ಳಬೇಕು. ಬುದ್ಧಿಶಾಲಿಯಾದ ರಾಜನು ದಂಡಾಧಿಕಾರಿಯಾಗಿ ಧರ್ಮದಿಂದ ಪ್ರಜೆಗಳನ್ನು ಪಾಲಿಸಬೇಕು. ಅಂಥ ಬಲಿಷ್ಠ ಮತ್ತು ಸಾಧಕನಿಗೆ ಸಮಸ್ತ ರಾಷ್ಟ್ರಗಳೂ ವಶವಾಗುತ್ತವೆ.
ಉ) ಸಂದರ್ಭಸಹಿತ ಸ್ವಾರಸ್ಯವನ್ನು ವಿವರಿಸಿ.
1 “ಸಾವಿರ ಮೂರ್ಖರಿಗಿಂತ ಒಬ್ಬ ಪಂಡಿತ ಲೇಸು”.
ಉತ್ತರ: ಪ್ರಸ್ತುತ ವಾಕ್ಯವನ್ನು ಕವಿ ಮಹಾಮಹೋಪಾಧ್ಯಾಯ ವಿದ್ವಾನ್ ಡಾ. ಎನ್. ರಂಗನಾಥ ಶರ್ಮಾರವರು ರಚಿಸಿದ ‘ಶರ್ಮಾರ ಶ್ರೀ ಮದ್ವಾಲ್ಮೀಕಿ ರಾಮಾಯಣಮ್’ ಕೃತಿಯ ಅಯೋಧ್ಯಾಕಾಂಡ ಸಂಪುಟದ ‘ರಾಮರಾಜ್ಯ’ವೆಂಬ ಪಠ್ಯದಲ್ಲಿ ಈ ವಾಕ್ಯವನ್ನು ಆರಿಸಿಕೊಳ್ಳಲಾಗಿದೆ.
ಸ್ವಾರಸ್ಯ : ಈ ಮಾತು ರಾಮನು ಭರತನಿಗೆ ಹೇಳಿದನು. ಕಷ್ಟ ಕಾಲದಲ್ಲಿ ಪಂಡಿತನೊಬ್ಬನೇ ಸರಿಯಾದ ಉಪಾಯವನ್ನು ಬೋಧಿಸಿ ಕಾರ್ಯವನ್ನು ನಿರ್ವಹಿಸಬಲ್ಲ. ಮೂರ್ಖರ ಸಂಖ್ಯೆ ಸಾವಿರವಿರಲಿ, ಹತ್ತು ಸಾವಿರವೇ ಇರಲಿ, ರಾಜನಿಗೆ ಯಾವ ಸಹಾಯವೂ ಆಗುವುದಿಲ್ಲ. ಮೇಧಾವಿಯೂ ಶೂರನೂ ಕಾರ್ಯದಕ್ಷನೂ ರಾಜ್ಯಶಾಸ್ತ್ರವಿಶಾರದನೂ ಆದ ಸಚಿವನು ಒಬ್ಬನೇ ಆದರೂ ರಾಜನಿಗಾಗಲೀ ರಾಜ್ಯದ ಆಡಳಿತವನ್ನು ನಿರ್ವಹಿಸುವವನಿಗಾಗಲೀ ಮಹತ್ತರವಾದ ಶ್ರೇಯಸ್ಸನ್ನು ತಂದುಕೊಡಬಲ್ಲನು.
೨ “ದೂತನು ಕಾರ್ಯಸಮರ್ಥನೂ ಪ್ರತಿಭಾಶಾಲಿಯೂ ಆಗಿರಬೇಕು”.
ಉತ್ತರ: ಪ್ರಸ್ತುತ ವಾಕ್ಯವನ್ನು ಕವಿಮಹೋಪಾಧ್ಯಾಯ ವಿದ್ವಾನ್ ಡಾ. . ಎನ್. ರಂಗನಾಥ ಶರ್ಮಾರವರು ರಚಿಸಿದ ‘ಶರ್ಮಾರ ಶ್ರೀ ಮದ್ವಾಲ್ಮೀಕಿ ರಾಮಾಯಣಮ್’ ಎಂಬ ಕೃತಿಯ ಅಯೋಧ್ಯಾಕಾಂಡ ಸಂಪುಟದಿಂದ ‘ರಾಮರಾಜ್ಯ’ವೆಂಬ ಪಠ್ಯದಿಂದ ಈ ವಾಕ್ಯವನ್ನು ಆರಿಸಿಕೊಳ್ಳಲಾಗಿದೆ.
ಸ್ವಾರಸ್ಯ : ಈ ವಾಕ್ಯವನ್ನು ರಾಮನು ಭರತನಿಗೆ ಹೇಳುತ್ತಾನೆ. ದೂತನು ಕಾರ್ಯ ಸಮರ್ಥನೂ ಪ್ರತಿಭಾ ಶಾಲಿಯೂ ಆಗಿರಬೇಕು. ಹೇಳಿಕಳಿಸಿದ ಸಂದೇಶವನ್ನಷ್ಟೇ ತಿಳಿಸುವ ಸತ್ಯವಂತನಕ್ಕಾಗಿ. ವ್ಯಕ್ತಿ, ವಸ್ತುಗಳ ಮೌಲ್ಯವನ್ನು ಯೋಗ್ಯತೆಯನ್ನೂ ಸರಿಯಾಗಿ ಗುರುತಿಸಬಲ್ಲ ನಿಷ್ಣಾತನಾಗಿರಬೇಕು. ಶತ್ರು ಪಕ್ಷದಲ್ಲಿ ಮಂತ್ರಿಯೇ ಮೊದಲಾದ ಹದಿನೆಂಟು ಇಲಾಖೆಗಳು ಹೇಗೆ ನಡೆದುಕೊಳ್ಳುತ್ತಿವೆಯೆಂದು ಪರೀಕ್ಷಿಸಲು ಒಬ್ಬೊಬ್ಬರ ಮೇಲೆ ಮೂವರು ಗೂಢಚಾರರಂತೆ ನಿಯಮಿಸಬೇಕು. ಗೂಢಚಾರರಿಗೂ ಅನ್ಯೋನ್ಯ ಪರಿಚಯವಿರಬಾರದು. ಹಾಗೆಯೇ ಸ್ವಪಕ್ಷದಲ್ಲಿ ಸೇನಾಪತಿಯೇ ಮೊದಲಾದ ಹದಿನೈದು ಇಲಾಖೆಗಳನ್ನು ಗೂಢಚಾರರಿಂದ ಪರೀಕ್ಷಿಸಬೇಕು. ಇದಕ್ಕೆ ಏರ್ಪಾಡು ಮಾಡಬೇಕು ಎಂದು ರಾಮನು ಭರತನಿಗೆ ಹೇಳಿದನು.
3. “ಪೂರ್ವಿಕರ ವ್ಯಕ್ತಿತ್ವದ ಅತ್ಯುತ್ತಮ ಅಂಶಗಳನ್ನು ರಾಜನು ಅಳವಡಿಸಿಕೊಳ್ಳಬೇಕು”.
ಉತ್ತರ: ಪ್ರಸ್ತುತ ವಾಕ್ಯವನ್ನು ಕವಿ ಮಹಾಮಹೋಪಾಧ್ಯಾಯ ವಿದ್ವಾನ್ ಡಾ. ಎನ್. ರಂಗನಾಥ ಶರ್ಮಾರವರು ರಚಿಸಿದ ‘ಶರ್ಮಾರ ಶ್ರೀ ಮದ್ವಾಲ್ಮೀಕಿ ರಾಮಾಯಣಮ್’ ಎಂಬ ಕೃತಿಯ ಅಯೋಧ್ಯಾಕಾಂಡ ಸಂಪುಟದಿಂದ ‘ರಾಮರಾಜ್ಯ’ವೆಂಬ ಪಠ್ಯದಿಂದ ಈ ವಾಕ್ಯವನ್ನು ಆರಿಸಿಕೊಳ್ಳಲಾಗಿದೆ.
ಸ್ವಾರಸ್ಯ : ರಾಮನು ಭರತನಿಗೆ ರಾಜತ್ವವನ್ನು ನಡೆಸುವ ರೀತಿ ನೀತಿಗಳನ್ನು ಹೇಳಿಕೊಡುತ್ತಿದ್ದ ಈ ಮೇಲಿನ ಮಾತುಗಳನ್ನು ಹೇಳಿದ್ದಾನೆ. ರಾಜ ದೋಷಗಳ ಬಗ್ಗೆ ಚರ್ಚಿಸುತ್ತಾ ರಾಜನು ಹೇಗಿರಬೇಕು ಯಾವ ಸದ್ಗುಣಗಳನ್ನು ಹೊಂದಿರಬೇಕು ಎಂಬುದನ್ನು ಕೂಲಂಕುಶವಾಗಿ ತಿಳಿಸಿ ರಾಜನು ಪೂರ್ವಿಕರ ವ್ಯಕ್ತಿತ್ವದ ಒಳ್ಳೆಯ ಅಂಶಗಳನ್ನು ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದ್ದಾನೆ.
ಭಾಷಾಭ್ಯಾಸ
ಅ) ಈ ಕೆಳಗಿನ ಪದಗಳ ವಚನವನ್ನು ಬದಲಿಸಿ ಬರೆಯಿರಿ.
ಮಾದರಿ : ದೂತ- ದೂತರು,
ಅಮಾತ್ಯ -ಅಮಾತ್ಯರು,
ಪ್ರಶ್ನೆ -ಪ್ರಶ್ನೆಗಳು,
ಧನುರ್ಧಾರಿಗಳು-ಧನುರ್ಧಾರಿ,
ಮೌಲ್ಯ-ಮೌಲ್ಯಗಳು,
ಬಹುಮಾನಗಳು-ಬಹುಮಾನ ,
ಆ) ಈ ಪದಗಳನ್ನು ಸ್ವಂತ ವಾಕ್ಯದಲ್ಲಿ ಬಳಸಿರಿ.
ಕೃಶ= ಭರತನ ದೇಹವು ಸೊರಗಿ ಕೃಶವಾಗಿತ್ತು.
ನಿದ್ರಾವಶ =ರಾಮನು ಭರತನಿಗೆ ನೀನು ನಿದ್ರಾವಶನಾಗದೆ ಯುಕ್ತ ಸಮಯದಲ್ಲಿ ಎಚ್ಚರದಿಂದ ಇರಬೇಕು ಎಂದು ಭೋಧಿಸಿದನು.
ಏರ್ಪಾಡು = ಯುದ್ಧದ ಸಂದರ್ಭದಲ್ಲಿ ಎಲ್ಲಾ ರೀತಿಯಿಂದ ಯುದ್ಧ ಸಾಮಗ್ರಿಗಳನ್ನು ಏರ್ಪಾಡು ಮಾಡಬೇಕು.
ಚಾಪಲ್ಯ = ನಾವು ಪಂಚೇಂದ್ರಿಯಗಳಿಗೆ ಅಧೀನರಾಗಿ ಇಂದ್ರಿಯ ಚಾಪಲ್ಯಕ್ಕೆ ಮುಳಗುವುದು.
ಜ್ಞಾತಿ=ಎಲ್ಲರಿಗೂ ಜ್ಞಾತಿಗಳು (ಸಂಬಂಧಿಗಳು) ಇದ್ದೇ ಇರುತ್ತಾರೆ.
ಈ ಕೆಳಗಿನ ಪದಗಳನ್ನು ಬಿಡಿಸಿ ಸಂಧಿಯ ಹೆಸರನ್ನು ಬರೆಯಿರಿ
ನಡೆಯುತ್ತಿದೆ+ಎಂಬುದನ್ನು ಆಗಮ ಸಂಧಿ
ಜಾವದಲ್ಲೆದ್ದು : ಜಾವದಲ್ಲಿ+ಎದ್ದು = ಜಾವದಲ್ಲೆದ್ದು ಲೋಪಸಂಧಿ
ನಿರ್ಭಯವಾಗಿ : ನಿರ್ಭಯ+ಆಗಿ = ನಿರ್ಭಯವಾಗಿ = ಆಗಮಸಂಧಿ
ಕಣ್ಣಿಟ್ಟಿರು : ಕಣ್ಣು+ಇಟ್ಟಿರು = ಕಣ್ಣಿಟ್ಟಿರು = ಲೋಪ ಸಂಧಿ
ಭಾಷಾ ಚಟುವಟಿಕೆ
1 ಆಗಮ ಸಂಧಿ ಎಂದರೇನು? ಉದಾಹರಣೆ ಕೊಡಿ.
ಉತ್ತರ: ಸ್ವರದ ಮುಂದೆ ಸ್ವರವು ಬಂದು ಸಂಧಿಯಾದಾಗ ಪೂರ್ವ ಪದದ ಕೊನೆಯ ಸ್ವರ ಹಾಗೂ ಉತ್ತರ ಪದದ ಮೊದಲ ಸ್ವರಗಳ ಮಧ್ಯದಲ್ಲಿ ‘ಯ’ ಕಾರವನ್ನು ಅಥವಾ ‘ವ’ ಕಾರವನ್ನು ಹೊಸದಾಗಿ ಸೇರಿಸಿದರೆ ಅದು ಆಗಮ ಸಂಧಿ.
ಆದೇಶ ಸಂಧಿ ಎಂದರೇನು? ಉದಾಹರಣೆ ಕೊಡಿ.
ಉತ್ತರ: ಉತ್ತರ ಪದದ ಆದಿಯಲ್ಲಿರುವ ಕ, ತ, ಪ ವ್ಯಂಜನಗಳಿಗೆ ಕ್ರಮವಾಗಿ ಗ, ದ, ಬ ವ್ಯಂಜನಗಳು ಆದೇಶವಾಗುವವು ಇದನ್ನು ಆದೇಶ ಸಂಧಿ ಎನ್ನುತ್ತಾರೆ.
ತುದಿ+ಕಾಲಲ್ಲಿ = (k>g) = ತುದಿಗಾಲಲ್ಲಿ
ಹುಲಿ+ತೊಗಲು = (ತ್>ದ್) = ಹುಲಿದೊಗಲು
ನೀರ್+ಪನಿ =(ಪ್>ವ್) ನೀರ್ವನಿ .
ಕಡು+ಬೆಳ್ಪು = (ಬ್>ವ್) = ಕಡುವೆಳ್ಪು
3. ಕೊಟ್ಟಿರುವ ಪದಗಳನ್ನು ಬಿಡಿಸಿ ಸಂಧಿಸಿ,
ಉತ್ತರ:
ಪಾತ್ರವನ್ನು = ಪಾತ್ರ+ಅನ್ನು = ಪಾತ್ರವನ್ನು, ಆಗಮಸಂಧಿ
ಚಳಿಗಾಲ = ಚಳಿ+ಕಾಲ = ಚಳಿಗಾಲ, ಆದೇಶಸಂಧಿ
ಪಡೆದಿದ್ದೇನೆ. ಪಡೆದು+ಇದ್ದೇನೆ= ಪಡೆದಿದ್ದೇನೆ ಲೋಪಸಂಧಿ
ಅಂಧಕಾರ: ಗದುಗಿನ ಶ್ರೀ ಪುಟ್ಟರಾಜ ಗವಾಯಿಗಳು ಅಂಧಕಾರದಲ್ಲಿ ಜೀವಿಸುತ್ತಿರುವ ಹಲವಾರು ಅಂಧರ ಜೀವನಕ್ಕೆ ಬೆಳಕಾಗಿದ್ದಾರೆ.
ಹದಿನಾರಾಣೆ: ಹಿಂದಿನ ಕಾಲದಲ್ಲಿ ಹದಿನಾರಣೆಗೆ ಸಂತೆ ಬಜಾರವನ್ನೇ ಖರೀದಿಸಿ.
ನಿಭಾಯಿಸು: ಒಂದು ಕುಟುಂಬವನ್ನು ನಿಭಾಯಿಸಲು ತಂದೆ-ತಾಯಿಗಳು ಕಷ್ಟಪಡುತ್ತಾರೆ.
ಮುಸುಕಿರುವ: ನ್ಯಾಯಾಲಯದಲ್ಲಿ ಎಷ್ಟೋ ಅನ್ಯಾಯಗಳು ನಡೆಯುತ್ತಿವೆ.
5 ಕೊಟ್ಟಿರುವ ಪದಗಳನ್ನು ವಿಗ್ರಹಿಸಿ, ಸಮಾಸ ಹೆಸರಿಸಿ,
ಮರದ+ಕಾಲು = ಮರಗಾಲು. ತತ್ಪುರುಷ ಸಮಾಸ
ಹಿರಿದು+ಮರ =ಹೆಮ್ಮರ. ಕರ್ಮಧಾರಯ ಸಮಾಸ
ಬಿಳಿದು+ಕೊಡೆ = ಬೆಳ್ಗೊಡೆ. ಕರ್ಮಧಾರಯ ಸಮಾಸ
ಒಡೆದ+ಕಟ್ಟು = ಒಗ್ಗಟ್ಟು ದ್ವಿಗು ಸಮಾಸ
ಸಪ್ತ+ಸ್ವರಗಳು = ಸಪ್ತಸ್ವರಗಳು. ದ್ವಿಗು ಸಮಾಸ
6. ಕೊಟ್ಟಿರುವ ಗಾದೆಯನ್ನು ವಿಸ್ತರಿಸಿ ಬರೆಯಿರಿ.
1. ತುಂಬಿದ ಕೊಡ ತುಳುಕುವುದಿಲ್ಲ.
ಉತ್ತರ : ಪರಿಪೂರ್ಣ ಜ್ಞಾನವನ್ನು ಕುರಿತು ಈ ಗಾದೆಯು ಹೇಳುತ್ತದೆ. ಪರಿಪೂರ್ಣ ಜ್ಞಾನಿಯಾದವನು ಯಾವಾಗಲೂ ತನ್ನ ಕುರಿತಾಗಿ ಜಂಭಕೊಚ್ಚಿಕೊಳ್ಳುವುದಿಲ್ಲ. ಆದರೆ ಅರ್ಧಜ್ಞಾನಿಯಾದವನು ತಾನು ಎಲ್ಲವನ್ನು ಬಲ್ಲೆನೆಂದು ಅಹಂಕಾರ ಪಡುತ್ತಾನೆ. ಮೇಲಾಗಿ ಪೂರ್ಣ ಕುಂಭವು ಶುಭದ ಸಂಕೇತವಾಗಿದೆ. ನಾವು ಎಷ್ಟು ತಿಳಿದಿದ್ದೇವೆ ಎಂದರೂ ತಿಳಿಯಬೇಕಾದದ್ದು ಈ ದೇಶದ ಸಾಕಷ್ಟಿದೆ. ಆದ್ದರಿಂದ ನಾವು ಜ್ಞಾನವೇಷಿಯಾಗಿಯೇ ಇರಬೇಕು. ಜ್ಞಾನಕ್ಕೆ ಕೊನೆಯೆಂಬುದು ಇರುವುದಿಲ್ಲ. ವ್ಯಕ್ತಿಯ ಜೀವನಕ್ಕೆ ಒಂದು ಮಿತಿ ಇದೆ. ಆದರೆ ಜ್ಞಾನಕ್ಕೆ ಮಿತಿಯೆಂಬುದೇ ಇಲ್ಲ. ತುಂಬಿದ ಕೊಡದಂತಿರುವ ಮನುಷ್ಯನ ವ್ಯಕ್ತಿತ್ವವು ಭಿನ್ನವಾಗಿಯೇ ಇರುತ್ತದೆ.
2. ಬೆಳ್ಳಗಿರುವುದೆಲ್ಲ ಹಾಲಲ್ಲ.
ಉತ್ತರ : ಯಾವುದೇ ಸಂಗತಿಯನ್ನು ಕುರಿತುನಾವು ನೇರವಾಗಿ ನಂಬಬಾರದು. ಪ್ರತ್ಯಕ್ಷ ಕಂಡರೂ ಪ್ರಮಾಣಿಸಿ ನೋಡಬೇಕು. ಸೇರಿದಂತೆ ಸಮಕಾಲೀನ ಸಮಾಜದಲ್ಲಿ ಮೋಸಗಾರರು ಹಾಗೂ ನಯವಂಚಕರೇ ಇದ್ದಾರೆ. ಕಾರಣ ಯಾವುದೇ ಅದನ್ನು ನಾವು ಸಾರಸರ ವಿಚಾರ ಮಾಡಿ ನಂಬಬೇಕು. ಕೇವಲ ಕುರುಡು ನಂಬಿಕೆಯಿಂದ ಸಾಗಿದರೆ ಮೋಸದ ಜಾಲದಲ್ಲಿ ಬೀಳುವುದು ನಿಶ್ಚಿತ. ಈ ಮಾತಿಗೆ ಹಲವಾರು ಐತಿಹಾಸಿಕ ನಿದರ್ಶನಗಳನ್ನು ಕೊಡಬಹುದು. ತಿಳಿಯುವ ಮುನ್ನ ಬರೆಯುವ ಮುನ್ನ ಸಾರಸರ ವಿಚಾರವನ್ನು ಮಾಡಬೇಕು. ಅಂದಾಗ ನಮ್ಮ ಜೀವನ ಸುರಕ್ಷಿತವಾಗಬಲ್ಲದು.