ಭಾರತದ ಪ್ರಮುಖ ಕೈಗಾರಿಕೆಗಳು 9ನೇ ತರಗತಿ ಸಮಾಜ ವಿಜ್ಞಾನ ಅಧ್ಯಾಯ 28 ನೋಟ್ಸ್ ಅಥವಾ ಪ್ರಶ್ನೋತ್ತರಗಳು

I. ಖಾಲಿ ಬಿಟ್ಟಿರುವ ಸ್ಥಳಗಳನ್ನು ಸೂಕ್ತ ಪದಗಳಿಂದ ಭರ್ತಿ ಮಾಡಿರಿ.
೧. ಬೆಂಗಾಲ್ ಐರನ್ ಕಂಪನಿಯು ಪಶ್ಚಿಮ ಬಂಗಾಳದ ಕುಲ್ಟಿ ಎಂಬಲ್ಲಿ ಸ್ಥಾಪಿತಗೊಂಡಿತು.
೨. ವಿವಿಧ ಬಗೆಯ ನಾರುಗಳಿಂದ ಬಟ್ಟೆಯನ್ನು ತಯಾರಿಸುವುದನ್ನು ಜವಳಿ ಕೈಗಾರಿಕೆ ಎಂದು ಕರೆಯುವರು.
೩. ಭಾರತದ ಮೊದಲ ಕಾಗದದ ಕೈಗಾರಿಕೆಯು ಹೂಗ್ಲಿ ನದಿಯ ದಡದಲ್ಲಿ ಸ್ಥಾಪನೆಗೊಂಡಿತು.
೪. ಇಸ್ರೋ ಸ್ಥಾಪನೆಯಾದ ವರ್ಷ 1969.
II. ಈ ಕೆಳಗಿನ ಪ್ರಶ್ನೆಗಳಿಗೆ ಸಂಕ್ತಿಪ್ತವಾಗಿ ಉತ್ತರಿಸಿ.

೫. ಭಾರತದ ಪ್ರಮುಖ ಕೈಗಾರಿಕಾ ವಲಯಗಳ ಪಟ್ಟಿ ತಯಾರಿಸಿ.

ಭಾರತದಲ್ಲಿ ೮ ಪ್ರಧಾನ ಕೈಗಾರಿಕಾ ವಲಯಗಳನ್ನು ಗುರುತಿಸಲಾಗಿದೆ. ಇವುಗಳೆಂದರೆ,
೧) ಹೂಗ್ಲಿ ಪ್ರದೇಶ
೨) ಮುಂಬೈ-ಪುಣೆ ಪ್ರದೇಶ
೩) ಅಹಮದಾಬಾದ್-ವಡೋದರ ಪ್ರದೇಶ
೪) ದಾಮೋದರ ಕಣಿವೆ ಪ್ರದೇಶ
೫) ದಕ್ಷಿಣದ ಕೈಗಾರಿಕಾ ಪ್ರದೇಶ
೬) ನ್ಯಾಷನಲ್ ಕ್ಯಾಪಿಟಲ್ ಪ್ರದೇಶ
೭) ವಿಶಾಖಪಟ್ಟಣ-ಗುಂಟೂರು ಪ್ರದೇಶ
೮) ಕೊಲ್ಲಂ-ತಿರುವನಂತಪುರ ಪ್ರದೇಶ.

೬. ಕಬ್ಬಿಣ ಮತ್ತು ಉಕ್ಕಿನ ಕೈಗಾರಿಕೆಗಳು ಇರುವ ಸ್ಥಳಗಳಾವುವು?

ಪ್ರಸ್ತುತ ಭಾರತದಲ್ಲಿರುವ ಕಬ್ಬಿಣ ಮತ್ತು ಉಕ್ಕಿನ ಪ್ರಮುಖ ಕೈಗಾರಿಕೆಗಳು :
೧) ಟಾಟಾ ಕಬ್ಬಿಣ ಮತ್ತು ಉಕ್ಕಿನ ಕೈಗಾರಿಕೆ (TISCO) ಜಮ್‌ಶೆಡ್‌ಪುರ – ಜಾರ್ಖಂಡ್
೨) ಇಂಡಿಯನ್ ಐರನ್ ಮತ್ತು ಸ್ಟೀಲ್ ಕಂಪನಿ (IISCO), ಬರ್ನ್ಪುರ-ಪಶ್ಚಿಮಬಂಗಾಳ
೩) ವಿಶ್ವೇಶ್ವರಯ್ಯ ಐರನ್ ಮತ್ತು ಸ್ಟೀಲ್ ಕಂಪನಿ (VISCO), ಭದ್ರಾವತಿ – ಕರ್ನಾಟಕ
೪) ಬಿಲಾಯಿ ಐರನ್ ಮತ್ತು ಸ್ಟೀಲ್ ಕಂಪನಿ, ಬಿಲಾಯಿ – ಛತ್ತೀಸ್‌ಘಡ್.

೭. ಕೈಗಾರಿಕೆಗಳ ಸ್ಥಾನೀಕರಣದ ಮೇಲೆ ಪ್ರಭಾವ ಬೀರುವ ಅಂಶಗಳಾವುವು?

ಕೈಗಾರಿಕೆಗಳ ಸ್ಥಾನೀಕರಣದ ಮೇಲೆ ಕಚ್ಛಾವಸ್ತುಗಳು, ಶಕ್ತಿ ಸಂಪನ್ಮೂಲಗಳು, ಮಾರುಕಟ್ಟೆ, ಸಂಚಾರ ಸೌಲಭ್ಯ, ಕಾರ್ಮಿಕರ ಪೂರೈಕೆ, ಬಂದರುಗಳ ಸೌಲಭ್ಯ ಮೊದಲಾದ ಹಲವಾರು ಅಂಶಗಳು ಪ್ರಭಾವ ಬೀರುತ್ತವೆ. ಕೈಗಾರಿಕೆಗಳ ಸ್ಥಾನವು ಕಡಿಮೆ ದರದ ಭೂಮಿ ದೊರೆಯುವಿಕೆ, ತಾಂತ್ರಿಕತೆ, ಸರ್ಕಾರದ ನೀತಿ ನಿಯಮಗಳಿಂದಲೂ ಪ್ರಭಾವಿತವಾಗಿರುವುದು.

೮. ಕಾಗದ ತಯಾರಿಕೆಯಲ್ಲಿ ಬಳಸುವ ಕಚ್ಚಾವಸ್ತುಗಳು ಯಾವುವು ?

ಅರಣ್ಯಗಳಿಂದ ದೊರೆಯುವ ಬಿದಿರು, ಮರದ ತಿರುಳು
ಹುಲ್ಲು, ಕಾಗದ ತಯಾರಿಕೆಯಲ್ಲಿ  ಬಳಸುವ ಪ್ರಮುಖ ಕಚ್ಚಾ ವಸ್ತುಗಳಾಗಿವೆ.

೯. ಹತ್ತಿ ಬಟ್ಟೆ ಕೈಗಾರಿಕೆಯ ಹಂಚಿಕೆಯನ್ನು ವಿವರಿಸಿ.
ಮಹಾರಾಷ್ಟ್ರ, ಗುಜರಾತ್, ತಮಿಳುನಾಡು, ಕರ್ನಾಟಕ, ಉತ್ತರ ಪ್ರದೇಶ, ಮಧ್ಯಪ್ರದೇಶ ರಾಜ್ಯಗಳು
ಬಹುಪಾಲು ಹತ್ತಿ ಬಟ್ಟೆ ಕೈಗಾರಿಕೆಗಳನ್ನು ಹೊಂದಿವೆ. ಮಹಾರಾಷ್ಟçದ ಮುಂಬೈನಲ್ಲಿ ಅತಿ ಹೆಚ್ಚು ಹತ್ತಿ
ಗಿರಣಿಗಳಿದ್ದು ಇದನ್ನು ಭಾರತದ ‘ಮ್ಯಾಂಚೆಸ್ಟರ್’ (ಮ್ಯಾಂಚೆಸ್ಟರ್ – ಇಂಗ್ಲೆAಡಿನ ಅತಿ ಪ್ರಮುಖ ಹತ್ತಿ ಬಟ್ಟೆ ಕೈಗಾರಿಕಾ ಕೇಂದ್ರ) ಅಥವಾ ಭಾರತದ ‘ಕಾಟನೋಪೊಲಿಸ್’ ಎಂದು ಕರೆಯುತ್ತಾರೆ.
ಇದಲ್ಲದೆ ನಾಗ್ಪುರ, ಸೋಲಾಪುರ, ಪಶ್ಚಿಮ ಬಂಗಾಳದ ಕೋಲ್ಕತ್ತಾ, ಉತ್ತರಪ್ರದೇಶದ ಕಾನ್ಪುರ, ಮಧ್ಯಪ್ರದೇಶದ ಇಂದೋರ್, ಗುಜರಾತಿನ ಸೂರತ್, ತಮಿಳುನಾಡಿನ ಕೊಯಮತ್ತೂರು, ಸೇಲಂ, ಚೆನ್ನೈ, ಕರ್ನಾಟಕದ ಬೆಂಗಳೂರು, ದಾವಣಗೆರೆ ಪ್ರಮುಖ ಹತ್ತಿ ಬಟ್ಟೆ ಕೈಗಾರಿಕಾ ಕೇಂದ್ರಗಳಾಗಿವೆ.

೧೦. ಜೈವಿಕ ತಂತ್ರಜ್ಞಾನದಿಂದ ಕೃಷಿ ಕ್ಷೇತ್ರದ ಮೇಲಿನ ಪರಿಣಾಮಗಳೇನು ?

ಜೈವಿಕ ತಂತ್ರಜ್ಞಾನದಿಂದ ವ್ಯವಸಾಯದಲ್ಲಿ ದೊಡ್ಡ
ಕ್ರಾಂತಿಯೇ ಜರುಗಲು ಪ್ರಾರಂಭಿಸಿತು.ಸಸ್ಯ, ಪ್ರಾಣಿ ಮೊದಲಾದವುಗಳಿಗೆ ಕಸಿ ಮಾಡುವಿಕೆಯಿಂದ ಮತ್ತು ಹೊಸ ಹೊಸ ಬೀಜ, ಔಷಧ, ರಸಗೊಬ್ಬರ, ಸಾವಯವ ಗೊಬ್ಬರಗಳ ಬಳಕೆಯಿಂದ ಸೋಯಾ ಅವರೆ, ಮೆಕ್ಕೆಜೋಳ(ಗೋವಿನಜೋಳ), ಹತ್ತಿ, ಮೊದಲಾದ ಸಮ್ಮಿಶ್ರ ತಳಿಗಳನ್ನು ಅಭಿವೃದ್ಧಿಪಡಿಸಲಾಗಿದೆ.

೧೧. ಉನ್ನತ ತಂತ್ರಜ್ಞಾನದ ಬಳಕೆಯಿಂದ ಆದ ಬದಲಾವಣೆಗಳೇನು ?

ಉನ್ನತ ತಂತ್ರಜ್ಞಾನವನ್ನು ಬಳಸಿಕೊಳ್ಳುವುದರಿಂದಾಗಿ ಟೆಲಿಫೋನ್, ಅಂತರ್ಜಾಲ ಸಂಪರ್ಕ, ರಕ್ಷಣಾ ಇಲಾಖೆಗೆ ಸಂಬಂಧಿಸಿದಂತೆ ಫೋನ್, ಯುದ್ಧ ಸಾಮಗ್ರಿಗಳ ತಯಾರಿಕೆ, ಪರಮಾಣುಬಾಂಬ್ ತಯಾರಿಕೆ ಉಪಗ್ರಹ ಉಡಾವಣೆ, ಚಂದ್ರನ ಮೇಲೆ ಪಾದಾರ್ಪಣೆ, ಸರಕಾರಿ ಕಚೇರಿಗಳಲ್ಲಿ ಪಾರದರ್ಶಕ ಇ-ಆಡಳಿತ. (ಉದಾ : ನೆಮ್ಮದಿ, ಜನಸ್ಪಂದನ, ಸಕಾಲ ಇತ್ಯಾದಿ,) ಜಾಗತಿಕ ಆರ್ಥಿಕ ವ್ಯವಸ್ಥೆಯ ಸುಧಾರಣೆ, ಶೈಕ್ಷಣಿಕ ಸಾಮಾಜಿಕ ಆರ್ಥಿಕ ಸುಧಾರಣೆಗಳು ಸಾಧ್ಯವಾಗಿದೆ. ಇಂದು ಕೃತಕ ಬುದ್ಧಿಮತ್ತೆಯ (AI-ARTIFICIAL INTELLIGENCE) ಬಳಕೆಯೊಂದಿಗೆ ಉನ್ನತ ತಂತ್ರಜ್ಞಾನವು ಹೊಸ ಮಜಲನ್ನು ಪಡೆದಿದೆ.

೧೨. ಇಸ್ರೋದ ಪ್ರಮುಖ ಸಾಧನೆಗಳು ಯಾವುವು?
ಇಸ್ರೋದ ಮಹತ್ವದ ಸಾಧನೆಗಳು :
೧. ಭಾರತೀಯ ರಾಷ್ಟ್ರೀಯ ಉಪಗ್ರಹ ವ್ಯವಸ್ಥೆಯ ಅಭಿವೃದ್ಧಿ.(INSAT – INDIAN NATIONAL SATELLITE SYSTEM).
೨. ಮೊದಲ ಪ್ರಯತ್ನದಲ್ಲೇ ಮಂಗಳ ಗ್ರಹವನ್ನು ತಲುಪಿದ ಮೊದಲ ರಾಷ್ಟ್ರಭಾರತ. ಈ ಸಾಧನೆಯ ಮೂಲ ಕರ್ತೃ ಇಸ್ರೋ.
೩. ಚಂದ್ರನ ದಕ್ಷಿಣ ಧ್ರುವದ ಬಳಿ ಇಳಿದ ಮೊದಲ ದೇಶ ಭಾರತ. ಈ ಸಾಧನೆಯ ಹಿಂದಿನ ಶಕ್ತಿ ಇಸ್ರೋ ಸಂಸ್ಥೆಯಾಗಿದೆ.

III. ಹೊಂದಿಸಿ ಬರೆದಿದೆ.
ಅ ಬ
i. ಮುಂಬೈ……  ಸಿ) ಭಾರತದ ಮ್ಯಾಂಚೆಸ್ಟರ್
ii. ಬೆಂಗಳೂರು….. ಎ) ‘ಸಿಲಿಕಾನ್ ಕಣಿವೆ
iii. ಭದ್ರಾವತಿ……ಡಿ) ವಿಶ್ವೇಶ್ವರಯ್ಯ ಐರನ್ ಅಂಡ್ ಸ್ಟೀಲ್ ಕಂಪನಿ
iv. ಬೆಳಗಾವಿ ಜಿಲ್ಲೆ’……ಬಿ) ಸಕ್ಕರೆ ಕೈಗಾರಿಕೆಗಳು

IV. ಚಟುವಟಿಕೆ :
೧. ಭಾರತದ ನಕ್ಷೆ ಬರೆದು ವಿವಿಧ ಕೈಗಾರಿಕಾ ವಲಯಗಳನ್ನು ಗುರುತಿಸಿ.
V. ಯೋಜನೆ :
೧. ನಿಮ್ಮ ಸಮೀಪದ ಯಾವುದಾದರೊಂದು ಕೈಗಾರಿಕೆಗೆ ಭೇಟಿ ನೀಡಿ, ಅಲ್ಲಿಗೆ ಪೂರೈಕೆಯಾಗುವ ಕಚ್ಚಾವಸ್ತುಗಳು ಮತ್ತು ಉತ್ಪಾದಿಸುವ ವಸ್ತುವಿನ ಬಗ್ಗೆ ಮಾಹಿತಿ ಸಂಗ್ರಹಿಸಿ.

ದಾವಣಗೆರೆ ಜಿಲ್ಲೆಯಲ್ಲಿ ಕುಕ್ಕುವಾಡ ಗ್ರಾಮದಲ್ಲಿ ಶುಗರ್ ಫ್ಯಾಕ್ಟರಿ ಇದೆ ಇಲ್ಲಿಗೆ ಕಚ್ಚಾ ವಸ್ತುಗಳು ಕಬ್ಬು ಮತ್ತು ಉತ್ಪಾದಿಸುವ ವಸ್ತು ಸಕ್ಕರೆ.

Leave a Comment