Bhakti pantha hagu sufi parampare notes, 7th standard social science chapter 8,ಭಕ್ತಿ ಪಂಥ ಹಾಗೂ ಸೂಫಿ ಪರಂಪರೆ ಪ್ರಶ್ನೆ ಉತ್ತರಗಳು,7ನೇ ತರಗತಿ ಸಮಾಜ ವಿಜ್ಞಾನ ಭಾಗ 1 ಅಧ್ಯಾಯ 8

7th standard social science chapter 8

bhakti pantha hagu Sufi parampare PDF

ಖಾಲಿ ಬಿಟ್ಟ ಸ್ಥಳಗಳನ್ನು ಸೂಕ್ತ ಪದದಿಂದ ಭರ್ತಿ ಮಾಡಿ.

1.ಅಕ್ಕಮಹಾದೇವಿಯವರ ವಚನದ ಅಂಕಿತನಾಮ ಚನ್ನಮಲ್ಲಿಕಾರ್ಜುನ

2. ಪುರಂದರದಾಸರು ಕೃಷ್ಣದೇವರಾಯನ ಆಸ್ಥಾನದಲ್ಲಿ ಇದ್ದರು.

3. ‘ಆದಿಕೇಶವ” ಎಂಬುದು ಕನಕದಾಸರ ಅಂಕಿತನಾಮ.

4. ಕರ್ನಾಟಕದ ಕಬೀರ ಎಂದು ಶಿಶುನಾಳ ಶರೀಫ ಅವರನ್ನು ಕರೆಯುತ್ತಾರೆ.

5.ಚೈತನ್ಯರ ಮೊದಲ ಹೆಸರು ವಿಶ್ವಂಭರ.

6. ಸೂಫಿ ಸಂತ ಖ್ವಾಜಾ  ಬಂದೇನವಾಜರಿಗಿದ್ದ ಇನ್ನೊಂದು ಹೆಸರು ಗೇಸುದರಾಜ್

II  ಈ ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿರಿ.

1. ಆಂಡಾಳರ ಮೂಲ ಹೆಸರೇನು?

ಉತ್ತರ: ಆಂಡಾಳ್ ರ ಮೂಲ ಹೆಸರು ಗೋದಾದೇವಿ.

2. ಅಕ್ಕಮಹಾದೇವಿ ಎಲ್ಲಿ ಜನಿಸಿದರು?

ಉತ್ತರ: ಶಿವಮೊಗ್ಗ ಜಿಲ್ಲೆಯ ಉಡುತಡಿ ಎಂಬಲ್ಲಿ ಅಕ್ಕಮಹಾದೇವಿ ಜನಿಸಿದರು.

3.ಕರ್ನಾಟಕ ಸಂಗೀತದ ಪಿತಾಮಹ ಯಾರು?

ಉತ್ತರ: ಪುರಂದರದಾಸರನ್ನು ಕರ್ನಾಟಕ ಸಂಗೀತ ಪಿತಾಮಹ ಎಂದು ಕರೆಯುತ್ತಾರೆ.

4.ಕನಕದಾಸರ ತಂದೆ-ತಾಯಿಗಳನ್ನು ಹೆಸರಿಸಿರಿ.

ಉತ್ತರ: ಬೀರಪ್ಪ ಮತ್ತು ಬಚ್ಚಮ್ಮ ಇವರು ಕನಕದಾಸರ ತಂದೆ ತಾಯಿಗಳು.

5. ಕನ್ನಡದ ಮೊದಲ ಮುಸ್ಲಿಂ ಕವಿ ಯಾರು?

ಉತ್ತರ: ಶಿಶುನಾಳ ಶರೀಫರು ಕನ್ನಡದ ಮೊದಲ ಮುಸ್ಲಿಂ ಕವಿ.

6. ಸಿಬ್ಬರ ಪವಿತ್ರ ಗ್ರಂಥ ಯಾವುದು?

ಉತ್ತರ: ಸಿಕ್ಕರ ಪವಿತ್ರ ಗ್ರಂಥ ‘ಗ್ರಂಥ ಸಾಹಿಬ್’.

7.ಕಲಿಯುಗದ ರಾಧಾ ಎಂದು ಯಾರನ್ನು ಕರೆಯುತ್ತಿದ್ದರು?

ಉತ್ತರ: ಸಂತ ಮೀರಾಬಾಯಿ ಇವರನ್ನು ಕಲಿಯುಗದ ರಾಧಾ ಎಂದು ಕರೆಯುತ್ತಿದ್ದರು.

8.  ಸೂಫಿ ಪದದ ಅರ್ಥವೇನು?

ಉತ್ತರ: ಸೂಫಿ ಎಂಬ ಪದವು ‘ಸಾಫ್’ ಎಂಬ ಪದದಿಂದ ಬಂದಿದೆ. ಇದರ ಅರ್ಥ ಶುಭ್ರ ಅಥವಾ ಶುಚಿ ಎಂಬುದಾಗಿದೆ.

9.ಭಾರತದ ಸೂಫಿ ಸಂತರು ಯಾರಾರು?

ಉತ್ತರ
ನಿಜಾಮುದ್ದೀನ್ ಅಲಿಯಾ, ಖ್ವಾಜಾ ಬಂದೇ ನವಾಜ್, ಮುಯಿನುದ್ದೀನ್ ಚಿಸ್ತಿ ಇವರು ಭಾರತದ ಸೂಫಿಸಂತರಾಗಿದ್ದಾರೆ.

10.ಚಿಸ್ತಿ ಪಂಗಡದ ಸ್ಥಾಪಕ ಯಾರು?

ಉತ್ತರ:ಚಿಸ್ತಿಪಂಗಡದ ಸ್ಥಾಪಕ ಮುಯಿನುದ್ದೀನ್ ಚಿಸ್ತಿ.

III  ಎರಡು ಅಥವಾ ಮೂರು ವಾಕ್ಯಗಳಲ್ಲಿ ಉತ್ತರಿಸಿರಿ.

1. ಕಬೀ‌ರ್ ದಾಸರು ನೀಡಿದ ಸಂದೇಶಗಳನ್ನು ತಿಳಿಸಿ.

ಉತ್ತರ:
ಇವರು ಹಿಂದೂ ಮುಸ್ಲಿಂ ಧರ್ಮಗಳ ನಡುವೆ ಸಾಮರಸ್ಯವನ್ನು ತರಲು ಪ್ರಯತ್ನಿಸಿದರು.ಜಾತಿ ಪದ್ಧತಿ, ಆಡಂಬರದ ಜೀವನ, ಜಾತಿ ಶ್ರೇಷ್ಠತೆ, ಧಾರ್ಮಿಕ ಅಸಮಾನತೆ ಇವುಗಳನ್ನು ಖಂಡಿಸಿದರು.ಪವಿತ್ರವಾದ ಭಕ್ತಿಮಾರ್ಗದಿಂದ ಮಾತ್ರ ದೇವರನ್ನು ಕಾಣಲು ಸಾಧ್ಯ ಎಂದು ಹೇಳಿದರು.

2.  ಗುರುನಾನಕರ ಬೋಧನೆಗಳೇನು?
ಉತ್ತರ:
ಗುರುನಾನಕರು ದೇವರ ಅಸ್ತಿತ್ವದಲ್ಲಿ ಅಚಲ ನಂಬಿಕೆಯನ್ನು ಹೊಂದಿದ್ದರು. ವಿಶ್ವಕ್ಕೆ ದೇವರು ಒಬ್ಬನೆ, ಅವನು ಸತ್ಯ ನಿತ್ಯನೆಂದು ಸಾರಿದರು. ಜೀವನದಲ್ಲಿ ಮೋಸ, ವಂಚನೆ, ಕಳ್ಳತನ, ಹಿಂಸೆ ಮಾಡಬಾರದು. ಗುರುವಿನಿಂದ ಭಕ್ತಿಯನ್ನು, ಭಕ್ತಿಯಿಂದ ಮುಕ್ತಿಯನ್ನು ಪಡೆಯಬಹುದು ಎಂದು ಹೇಳಿದರು. ಸಾಮಾಜಿಕ ಅನಿಷ್ಟಗಳಾದ ಮೂರ್ತಿಪೂಜೆ, ಜಾತಿಪದ್ಧತಿ, ಸತಿಪದ್ಧತಿ, ಮುಂತಾದವುಗಳನ್ನು ವಿರೋಧಿಸಿದರು.

3.  ಭಕ್ತಿ ಪಂಥದ ಪರಿಣಾಮಗಳು ಯಾವುವು?

ಉತ್ತರ:
ಭಕ್ತಿಪಂಥದ ಪರಿಣಾಮಗಳು
ಭಕ್ತಿಸಂತರು ಹಿಂದೂ-ಮುಸ್ಲಿಂ ಸಾಮರಸ್ಯ ಸಾಧಿಸುವಲ್ಲಿ ಪ್ರಮುಖ ಪಾತ್ರವಹಿಸಿದರು. ಭಕ್ತಿ ಸಂತರು ಜನರಾಡುವ ಸ್ಥಳೀಯ ಭಾಷೆಯಲ್ಲಿ ಸಾಹಿತ್ಯ ರಚನೆ ಮಾಡಿದರು. ಇದರಿಂದಾಗಿ ಭಾರತೀಯ ದೇಶಿ ಭಾಷೆಗಳು ಶ್ರೀಮಂತಗೊಂಡವು.

4.  ಸೂಫಿ ಪಂಥದ ಸಾರವನ್ನು ಸಂಗ್ರಹಿಸಿ ಬರೆಯಿರಿ.

ಉತ್ತರ:
1) ದೇವರು ಒಬ್ಬನೇ, ಆತನು ಸರ್ವಶಕ್ತನಾಗಿದ್ದಾನೆ. ನಾವೆಲ್ಲರೂ ಆತನ ಮಕ್ಕಳು, ಎಂದು ಪ್ರತಿಪಾದಿಸಿತು.
2) ಉತ್ತಮ ಕಾಯಕ (ಕೆಲಸ)ಕ್ಕೆ ಮಹತ್ವ ನೀಡಿತು.
3) ಎಲ್ಲಾ ಮಾನವರು ಸಮಾನರು ಎಂದು ಸಾರಿತು.
4) ಜಾತಿಪದ್ಧತಿಯನ್ನು ವಿರೋಧಿಸಿತು.

IV  ಈ ಕೆಳಗಿನ ‘ಎ’ ಪಟ್ಟಿಗೆ ಸಂಬಂಧಿಸಿದ ‘ಬಿ’ ಪಟ್ಟಿಯಲ್ಲಿನ ವಿಷಯಗಳನ್ನು ಹೊಂದಿಸಿ.

1. ಗುರುನಾನಕ್………………….8) ಸಿಖ್‌ಧರ್ಮ
2. ಚೈತನ್ಯ…………………………ಈ) ಹರೇಕೃಷ್ಣ ಪಂಥ
3. ನಿಜಾಮುದ್ದೀನ್ ಔಲಿಯ……………ಅ) ಸೂಫಿಸಂತ
4. ಮೀರಾಬಾಯಿ……………….ಇ) ಕಲಿಯುಗದ ರಾಧ

ಚರ್ಚಿಸಿ

ಭಕ್ತಿಸಂತರ ಬೋಧನೆಗಳ ಪ್ರಸ್ತುತತೆ’ ಕುರಿತು ಚರ್ಚಿಸಿ.

ಅಂದಿನ ಭಕ್ತಿ ಪಂಥದ ಬೋಧನೆಗಳು ಇಂದಿಗೆ ಮಾದರಿಯಾಗಿವೆ. ಈಗಲೂ ಜಾತಿ ಪದ್ಧತಿ, ಸಮಾಜದಲ್ಲಿ ಇಂದಿಗೂ ಬೇರೂರಿದೆ.ಎಲ್ಲಾ ಮಾನವರು ಒಂದೇ ಎನ್ನುವ ಭಾವನೆ ಮೂಡಿಸಬೇಕಾಗಿದೆ.ಜಾತಿ ಪದ್ಧತಿ, ಆಡಂಬರದ ಜೀವನ, ಜಾತಿ ಶ್ರೇಷ್ಠತೆ, ಧಾರ್ಮಿಕ ಅಸಮಾನತೆ, ಮೋಸ, ವಂಚನೆ, ಕಳ್ಳತನ, ಹಿಂಸೆ, ಇವು ಸಾರ್ವಕಾಲಿಕ ಸಾಮಾಜಿಕ ಪಿಡುಗುಗಳಾಗಿವೆ. ಈ ಪಿಡುಗುಗಳನ್ನು ತೊಡೆದು ಹಾಕಲು ಭಕ್ತಿ ಸಂತರ ಅವಶ್ಯಕತೆ ಎಂದಿಗೂ ಬೇಕಾಗಿದೆ.ಹಿಂದೂ ಬೇರೆ ಮುಸ್ಲಿಂ ಬೇರೆ ಎನ್ನುವ ಈ ಕಾಲದಲ್ಲಿ ಎಲ್ಲರಿಗೂ ಸಾಮರಸ್ಯ ಭಾವ ಮೂಡಿಸಬೇಕಾಗಿದೆ.









Leave a Comment