ನಾಲ್ಕನೇ ತರಗತಿ ಕನ್ನಡ ಒಗಟುಗಳು
ಬಣ್ಣ ಬಣ್ಣದ ಪುಕ್ಕ, ಇದೇ ಹಳ್ಳಿಯ ಗಡಿಯಾರ
ಉತ್ತರ: ಹುಂಜ
ದೊಡ್ಡೊಟ್ಟೆ ದೊಡ್ಡಣ್ಣಗೆ ಹಿಂದೂ ಬಾಲ, ಮುಂದು ಬಾಲ
ಉತ್ತರ: ಆನೆ
ಸಣ್ಣ ಆಕಾರದ ಸುಕುಮಾರ. ಮೃದುವಾದ ಮೈ, ಉದ್ದನೆಯ ಕಿವಿ, ಕಡ್ಡಿ ಮೀಸೆ, ಟಣ್ಣನೆಯ ಜಿಗಿತ
ಉತ್ತರ: ಮೊಲ
ಹತ್ತಲಾರದ ಮರಕ್ಕೆ ಹತ್ತಿದವನು ಜಾಣ. ಹತ್ತಿ ಹಣ್ಣನ್ನು ಮೆದ್ದವನು ನಿಪುಣ.
ಉತ್ತರ: ಅಳಿಲು
ಹುಲಿಯ ಚಿಕ್ಕಮ್ಮ, ಇಲಿಯ ಮುಕ್ಕಮ್ಮ
ಉತ್ತರ: ಬೆಕ್ಕು