Karnataka state syllabus changed syllabus 23 24

ಕರ್ನಾಟಕ ಸರ್ಕಾರದಲ್ಲಿ ಅಧಿಕಾರಕ್ಕೆ ಬಂದಿರುವ  ಕಾಂಗ್ರೆಸ್ ಸರ್ಕಾರ ಕರ್ನಾಟಕ ಪಠ್ಯ ಪುಸ್ತಕಗಳಲ್ಲಿ ಕೆಲವು ಬದಲಾವಣೆಗಳನ್ನು ಮಾಡಿ ಪರಿಷ್ಕೃತ ಪಠ್ಯದ ತಿದ್ದೋಲೆಯ ಪಿಡಿಎಫ್ ಅನ್ನು ಪ್ರಕಟಿಸಿದೆ. ಆ ಪಿಡಿಎಫ್ ಬೇಕಾದಲ್ಲಿ ನೀವು ಕೆಳಗಡೆ ಸ್ಕ್ರೋಲ್ ಮಾಡಿ ಪಡೆಯಬಹುದಾಗಿದೆ

ಅಧಿಕಾರಕ್ಕೆ ಬಂದ ದಿನದಿಂದಲೇ ಶಾಲಾ ಪಠ್ಯಪುಸ್ತಕ ಪರಿಷ್ಕರಣೆಯನ್ನು ಗಂಭೀರವಾಗಿ ಪರಿಗಣಿಸಿದ್ದ ಕಾಂಗ್ರೆಸ್‌ ಸರಕಾರವು, ಬಲಪಂಥೀಯರ ಪಾಠಗಳಿಗೆ ಟಾಂಗ್ ನೀಡಿ, ಹಳೆ ಪಠ್ಯಗಳನ್ನು ಕೈ ಬಿಡಲಾಗಿದೆ ಮತ್ತು ಹೊಸ ಪಠ್ಯಗಳನ್ನು ಸೇರ್ಪಡೆ ಮತ್ತು ಹಳೇ ಪಠ್ಯಗಳಿಗೆ ತಿದ್ದುಪಡಿ ಮಾಡಿದೆ.

ಬಿಜೆಪಿ ಸರಕಾರದ ಅವಧಿಯಲ್ಲಿಸೇರ್ಪಡೆ ಮಾಡಿದ್ದ ಪಠ್ಯಗಳನ್ನು ಕೈ ಬಿಟ್ಟು, ಈ ಹಿಂದೆ ಕಾಂಗ್ರೆಸ್‌ ಸರಕಾರ ಅಧಿಕಾರದಲ್ಲಿದ್ದಾಗ ಬರಗೂರು ರಾಮಚಂದ್ರಪ್ಪ ಸಮಿತಿ ರೂಪಿಸಿದ್ದ ಪಠ್ಯವನ್ನೇ ಬಹುತೇಕವಾಗಿ ಮುಂದುವರಿಸುತ್ತಿದೆ.

ಪ್ರಮುಖವಾಗಿ ಆರ್‌ಎಸ್‌ಎಸ್‌ ಸಂಸ್ಥಾಪಕ ‘ಕೇಶವ ಬಲಿರಾಮ ಹೆಡಗೇವಾರ’ ಪಠ್ಯದ ಬದಲಾಗಿ ‘ಸುಕುಮಾರ ಸ್ವಾಮಿಯ ಕತೆ’ ಸೇರ್ಪಡೆ ಮಾಡಲಾಗಿದೆ. ಚಕ್ರವರ್ತಿ ಸೂಲಿಬೆಲೆಯ ‘ತಾಯಿ ಭಾರತೀಯ ಅಮರ ಪುತ್ರರು’ ಎಂಬ ಗದ್ಯವನ್ನು ಪರಿಪೂರ್ಣವಾಗಿ ಕೈ ಬಿಡಲಾಗಿದೆ.

 

ಪಠ್ಯಗಳ ಮರುಮುದ್ರಣ ಅವಶ್ಯಕತೆ ಇಲ್ಲ
ಇದ್ದ ಪಠ್ಯ ಹಾಗೂ ಪರಿಷ್ಕರಣೆ ಪಠ್ಯಗಳನ್ನು ಪ್ರತ್ಯೇಕವಾದ ತಿದ್ದೋಲೆ ಮೂಲಕ ಶಾಲೆಗಳಿಗೆ ನೀಡಲು ಶಿಕ್ಷಣ ಇಲಾಖೆ ನಿರ್ಧರಿಸಿದೆ. ಇದರಿಂದಾಗಿ ಪಠ್ಯಪುಸ್ತಕ ಮರು ಮುದ್ರಣ ಮಾಡುವ ಅವಶ್ಯಕತೆ ಎದುರಾಗುವುದಿಲ್ಲ. 2023-24ನೇ ಸಾಲಿಗೆ ಸರಕಾರದ ಆದೇಶದ ಮೇರೆಗೆ ವಿಷಯ ತಜ್ಞರು 6 ಮತ್ತು 10ನೇ ತರಗತಿಗಳ ಕನ್ನಡ ಭಾಷಾ ಪಠ್ಯಪುಸ್ತಕಗಳನ್ನು ಹಾಗೂ 6ರಿಂದ 10ನೇ ತರಗತಿಗಳ ಸಮಾಜ ವಿಜ್ಞಾನದ ಪಠ್ಯಪುಸ್ತಕ ಪರಿಶೀಲಿಸಿ ಕೆಲವು ಮಾರ್ಪಾಡು ಮಾಡಿದ್ದಾರೆ. ಈ ಪರಿಷ್ಕೃತ ತಿದ್ದೋಲೆ ರೂಪಿಸಿ ಸರಕಾರ ಪಠ್ಯಕ್ರಮ ಅನುಸರಿಸುತ್ತಿರುವ ಎಲ್ಲ ಶಾಲೆಗಳಿಗೆ ನೀಡಲಾಗಿದೆ.

ಪ್ರಮುಖ ಬದಲಾವಣೆಗಳಾವುವು?
ಅನುಬಂಧ -1ರಲ್ಲಿ ಕನ್ನಡದ 9 ಪಠ್ಯ-ಗದ್ಯಗಳಲ್ಲಿ ಮತ್ತು ಅನುಬಂಧ-2ರಲ್ಲಿ 9 ಗದ್ಯದಲ್ಲಿ ಬದಲಾಣೆ ತಂದಿದೆ. ಇನ್ನು ಸಮಾಜ ವಿಜ್ಞಾನದ ಪಠ್ಯಪುಸ್ತಕದಲ್ಲಿ6ನೇ ತರಗತಿಯ ‘ನಮ್ಮ ಹೆಮ್ಮೆಯ ರಾಜ್ಯ ಕರ್ನಾಟಕ’ ಇದರಲ್ಲಿ ವಾಕ್ಯ ತಿದ್ದುಪಡಿ ಮಾಡಿದರೆ, ‘ವೇದಕಾಲದ ಸಂಸ್ಕೃತಿ’, ‘ಹೊಸ ಧರ್ಮಗಳ ಉದಯ’ ಎಂಬ ಹೊಸ ಅಧ್ಯಾಯ ಸೇರ್ಪಡೆ ಮಾಡಿದೆ. ‘ಮಾನವ ಹಕ್ಕುಗಳು’ ಎಂಬ ಅಧ್ಯಾಯ ಹೊಸದಾಗಿ ಸೇರ್ಪಡೆ ಮಾಡಲಾಗಿದೆ.

7ನೇ ತರಗತಿಯಲ್ಲಿ’ಜಗತ್ತಿನ ಪ್ರಮುಖ ಘಟನೆಗಳು’ ಅಧ್ಯಾಯದಲ್ಲಿಅನುವಾದ ಸರಿ ಮಾಡಿದೆ. ‘ಮೈಸೂರು ಮತ್ತು ಇತರ ಸಂಸ್ಥಾನಗಳು’, ‘ಸಾಮಾಜಿಕ ಮತ್ತು ಧಾರ್ಮಿಕ ಸುಧಾರಣೆಗಳು’, ‘ಸ್ವಾತಂತ್ರ್ಯ ಸಂಗ್ರಾಮ’ ಮತ್ತು 10ನೇ ತರಗತಿಯಲ್ಲಿ’ಭಾರತಕ್ಕಿರುವ ಸವಾಲುಗಳು ಮತ್ತು ಪರಿಹಾರೋಪಾಯಗಳು’ ಎಂಬ ವಿಷಯದಲ್ಲಿಸಣ್ಣ-ಪುಟ್ಟ ಬದಲಾವಣೆ ಮಾಡಿದೆ.

ಪಠ್ಯ ಬದಲಾವಣೆ ಸಂಪೂರ್ಣ ವಿವರ ಇಲ್ಲಿದೆ

ತರಗತಿ ಜಾರಿಯಲ್ಲಿದ್ದ ಪಠ್ಯ ಬದಲಾವಣೆಗೊಂಡ ಪಠ್ಯ
ತರಗತಿ 6 ನಮ್ಮದೇನಿದೆ?-ನಿರ್ಮಲಾ ಸುರತ್ಕಲ್‌ ನೀ ಹೋದ ಮರುದಿನ- ಚೆನ್ನಣ್ಣ ವಾಲೀಕಾರ
ತರಗತಿ 7 ಸಾಮಾಜಿಕ ಕಳಕಳಿಯ ಮೊದಲ ಶಿಕ್ಷಕಿ ರಮಾನಂದ ಆಚಾರ್ಯ ಸಾವಿತ್ರಿಬಾಯಿ ಪುಲೆ- ಡಾ. ಎಚ್‌.ಎಸ್‌.ಅನುಪಮ
ತರಗತಿ 8 ಭೂ ಕೈಲಾಸ ಪೌರಾಣಿಕ ನಾಟಕ -ನರಸಿಂಹ ಐತಾಳ ಮಗಳಿಗೆ ಬರೆದ ಪತ್ರ- ಮೂಲ ನೆಹರು

ತರಗತಿ 10 ನಿಜವಾದ ಆದರ್ಶ ಪುರುಷಯಾರಾಗಬೇಕು?-ಹೆಡಗೇವಾರ ಸುಕುಮಾರಸ್ವಾಮಿಯ ಕತೆ- ಶಿವಕೋಟ್ಯಾಚಾರ್ಯ
ತರಗತಿ 10 ಶ್ರೇಷ್ಠ ಭಾರತೀಯ ಚಿಂತನೆಗಳು-ಆರ್‌.ಗಣೇಶ್‌ ಯುದ್ಧ-ಸಾ.ರಾ.ಅಬೂಬಕ್ಕರ್‌
ತರಗತಿ 10 ತಾಯಿ ಭಾರತೀಯ ಅಮರ ಪುತ್ರರು-ಚಕ್ರವರ್ತಿ ಸೂಲಿಬೆಲೆ ಪೂರ್ಣ ಗದ್ಯ ಕೈಬಿಡಲಾಗಿದೆ
ತರಗತಿ 10 ವೀರಲವ- ಲಕ್ಷ್ಮೇಶ ಇದೇ ಪಠ್ಯದಲ್ಲಿ ವಾಲ್ಮೀಕಿ ಪರಿಚಯದ ತಿದ್ದುಪಡಿ
ತರಗತಿ 8 ಕಾಲವನ್ನು ಗೆದ್ದವರು-ಕೆ.ಟಿ.ಗಟ್ಟಿ ಬ್ಲಡ್‌ ಗ್ರೂಪ್‌- ವಿಜಯಮಲಾ ರಂಗನಾಥ್‌
ತರಗತಿ 9 ಅಚ್ಚರಿಯ ಜೀವಿ ಇಂಬಳ ಉರುಸುಗಳಲ್ಲಿ ಭಾವೈಕ್ಯತೆ-ದಸ್ತಗೀರ ಅಲ್ಲೀಭಾಯಿ

 

ಕರ್ನಾಟಕ ಪಠ್ಯಪುಸ್ತಕ 2023 24ನೇ ಸಾಲಿನ ಪರಿಷ್ಕೃತ ತಿದ್ದೋಲೆಯ ಪಿಡಿಎಫ್ ಅನ್ನು  ಪಡೆಯಲು ಈ ಕೆಳಗಿನ ನೀಲಿ ಅಕ್ಷರಗಳನ್ನು ಒತ್ತಿ ಅಥವಾ ಲಿಂಕನ್ನು ಮುಟ್ಟಿ

 

Karnataka state syllabus 2023-24 changed syllabus

Leave a Comment