Namma karnataka belagavi vibhaga notes question answer in kannada, 6th samaja notes in Kannada

Pupils may Download Social science History Chapter 2 Namma Karnataka Questions and Answers, notes Pdf, correct Solutions for Class , 6th Social Science in Kannada helps you to understand the complete Karnataka State Board Syllabus and score maximum marks in your examinations.

Karnataka State Syllabus Class 6 Social Science History Chapter 2 Namma Karnataka in Kannada

By reading Class 6 Social Science Namma Karnataka Text Book Questions and Answers extra marks in your examinations.

Karnataka State Syllabus Class 6 Social Science History Chapter 2 Namma Karnataka in Kannada

Class 6 Social Science Namma Karnataka Text Book Questions and Answers

1. ಬ್ರಿಟಿಷರ ವಿರುದ್ಧ ಹೋರಾಟ ನಡೆಸಿದ
ರಾಣಿಯ ಹೆಸರೇನು?

ಉತ್ತರ : ಬ್ರಿಟಿಷರ ವಿರುದ್ಧ ಹೋರಾಟ ನಡೆಸಿದ ರಾಣಿಯ
ಹೆಸರು ಕಿತ್ತೂರು ರಾಣಿ ಚೆನ್ನಮ್ಮ.

2. ಹಾವೇರಿ ಗದಗ ಮತ್ತು ಬಾಗಲಕೋಟೆ ಹೊಸ ಜಿಲ್ಲೆಗಳು
ಯಾವ ವರ್ಷ ರಚನೆಗೊಂಡವು?

ಉತ್ತರ : 1997ರಲ್ಲಿ ಹಾವೇರಿ ಗದಗ ಮತ್ತು ಬಾಗಲಕೋಟೆ
ಜಿಲ್ಲೆಗಳು ರಚನೆಗೊಂಡವು.

3. ಮಹಾತ್ಮ ಗಾಂಧಿ ಅಧ್ಯಕ್ಷತೆಯಲ್ಲಿ ಕಾಂಗ್ರೆಸ್ ಅಧಿವೇಶನ
ಈ ವಿಭಾಗದ ಯಾವ ಜಿಲ್ಲೆಯಲ್ಲಿ ಯಾವ ವರ್ಷ ನಡೆಯಿತು?

ಉತ್ತರ: ಬೆಳಗಾವಿ ಜಿಲ್ಲೆಯಲ್ಲಿ 1924ರಲ್ಲಿ ಮಹಾತ್ಮ ಗಾಂಧಿ
ಅಧ್ಯಕ್ಷತೆಯ ಕಾಂಗ್ರೆಸ್ ಅಧಿವೇಶನ ನಡೆಯಿತು.

4. ಬಾದಾಮಿಯು ಯಾವ ಅರಸು ಮನೆತನದ ರಾಜಧಾನಿ ಆಗಿತ್ತು?

ಉತ್ತರ: ಬಾದಾಮಿಯು ಚಾಲುಕ್ಯರ ರಾಜಧಾನಿಯಾಗಿತ್ತು.

5. ಬೆಳಗಾವಿ ವಿಭಾಗದ ಎರಡು ಪ್ರಮುಖ ನದಿಗಳ ಹೆಸರನ್ನು ಬರೆಯಿರಿ.

ಉತ್ತರ : ಕೃಷ್ಣ, ಮಲಪ್ರಭಾ ಇವು ಬೆಳಗಾವಿ ವಿಭಾಗದ ಎರಡು ಪ್ರಮುಖ ನದಿಗಳು.

6. ಈ ವಿಭಾಗದಲ್ಲಿರುವ ಪ್ರಮುಖ ವನ್ಯಮೃಗಧಾಮಗಳ ಹೆಸರನ್ನು ಬರೆಯಿರಿ.

ಉತ್ತರ :ಬೆಳಗಾವಿ ವಿಭಾಗದಲ್ಲಿರುವ ಪ್ರಮುಖ ವನ್ಯಮೃಗಧಾಮಗಳೆಂದರೆ ಅಂಶಿ ರಾಷ್ಟ್ರೀಯ ಉದ್ಯಾನವನ ಕಾಳಿ ನದಿಯ ದಡದಲ್ಲಿದೆ .ಮತ್ತೊಂದು ದಾಂಡೇಲಿ ವನ್ಯಮೃಧಾಮ ,ಅಟ್ಟಿವೇರಿ ಪಕ್ಷಿಧಾಮ.

7. ಳಕಲ್ಲಿನಲ್ಲಿ ಯಾವ ಸಂಪನ್ಮೂಲ ದೊರೆಯುತ್ತದೆ?

ಉತ್ತರ: ಇಳಕಲ್ಲು ಭಾಗದಲ್ಲಿ ಗ್ರಾನೈಟಿನ ಅಪಾರ ನಿಕ್ಷೇಪವಿದೆ.

8. ನಿತ್ಯಹರಿದ್ವರ್ಣ ಕಾಡುಗಳೆಂದರೆ ಯಾವುವು?

ಉತ್ತರ:. ಉಷ್ಣವಲಯದ ದಟ್ಟವಾದ ಬಹು ಹಂತದ ಕಾಡುಗಳನ್ನು ಮತ್ತು ವರ್ಷಪೂರ್ತಿ ಹಸಿರಾಗಿರುವ ಕಾಡುಗಳನ್ನು ನಿತ್ಯಹರಿದ್ವರ್ಣ ಕಾಡುಗಳೆಂದು ಕರೆಯುತ್ತಾರೆ.

9. ಬೆಳಗಾವಿ ವಿಭಾಗದ ಪ್ರಮುಖ ಜಲಪಾತಗಳನ್ನು ಹೆಸರಿಸಿ.

ಉತ್ತರ : ಬೆಳಗಾವಿ ವಿಭಾಗದ ಜಲಪಾತಗಳೆಂದರೆ ಗೋಕಾಕ್ ಜಲಪಾತ , ದಾಂಡೇಲಿ ಹತ್ತಿರದ ಮಾಗೋಡು ಜಲಪಾತ, ಕಾರವಾರ ಹತ್ತಿರದ ದೇವ ಮಾಲಾ ಜಲಪಾತ ,ಮುರುಡೇಶ್ವರದ ಹತ್ತಿರವಿರುವ ಅಪ್ಸರಕೊಂಡ ಜಲಪಾತ.

10. ಬೆಳಗಾವಿ ವಿಭಾಗದ ಯಾವ ಜಿಲ್ಲೆಯಲ್ಲಿ ಕಬ್ಬಿಣದ ಅದಿರು ದೊರೆಯುತ್ತದೆ?

ಉತ್ತರ : ಬೆಳಗಾವಿ ವಿಭಾಗದ ಬಾಗಲಕೋಟೆ ಜಿಲ್ಲೆಯಲ್ಲಿ ಕಬ್ಬಿಣದ ಅದಿರು ದೊರೆಯುತ್ತದೆ.

11. ಬೆಳಗಾವಿ ವಿಭಾಗದ ಜಿಲ್ಲೆಗಳಲ್ಲಿ ಬೆಳೆಯುವ ಪ್ರಮುಖ ಕೃಷಿ ಉತ್ಪನ್ನಗಳಾವುವು?

ಉತ್ತರ: ಬೆಳಗಾವಿ ವಿಭಾಗದ ಪ್ರಮುಖ ಕೃಷಿ ಉತ್ಪನ್ನಗಳೆಂದರೆ ಭತ್ತ ,ಹತ್ತಿ ,ಮೆಕ್ಕೆಜೋಳ, ಬೇಳೆ ಕಾಳು ,ಗೋಧಿ, ಶೇಂಗಾ, ಸಜ್ಜೆ, ಮೆಣಸಿನಕಾಯಿ, ಮಹಾಲಿಂಗಪುರದ ಬೆಲ್ಲ ,ಬ್ಯಾಡಗಿಯ ಒಣ ಮೆಣಸಿನಕಾಯಿ, ಗೋಡಂಬಿ ಮುಂತಾದವು.

12. ಬೆಳಗಾವಿ ವಿಭಾಗದ ಯಾವ ಜಿಲ್ಲೆಯಲ್ಲಿ ಮೀನುಗಾರಿಕೆಯು ಜನರ ಪ್ರಮುಖ ಉದ್ಯೋಗವಾಗಿದೆ?

ಉತ್ತರ: ಮೀನುಗಾರಿಕೆಯು ಉತ್ತರ ಕನ್ನಡ ಜಿಲ್ಲೆಯಲ್ಲಿನ ಮುಖ್ಯ ಉದ್ಯೋಗವಾಗಿದೆ.

13. ಬೆಳಗಾವಿ ವಿಭಾಗದ ಯಾವ ಜಿಲ್ಲೆಯಲ್ಲಿ ಬೀಜೋತ್ಪಾದನಾ ಕೇಂದ್ರಗಳಿವೆ?

ಉತ್ತರ: ಹಾವೇರಿ ಜಿಲ್ಲೆಯು ಬೀಜೋತ್ಪಾದನ ಕೇಂದ್ರವಾಗಿದೆ.

14. ಬೆಳಗಾವಿ ವಿಭಾಗದ ಬ್ಯಾಡಗಿಯು ಯಾವ ಕೃಷಿ ಉತ್ಪನ್ನಕ್ಕೆ ಹೆಸರುವಾಸಿಯಾಗಿದೆ?

ಉತ್ತರ: ಬೆಳಗಾವಿ ವಿಭಾಗದ ಬ್ಯಾಡಗಿಯು ಒಣ ಮೆಣಸಿನಕಾಯಿಗೆ ಹೆಸರುವಾಸಿಯಾಗಿದೆ.

15. ಬೆಳಗಾವಿ ವಿಭಾಗದ ನಾಲ್ವರು ಜ್ಞಾನಪೀಠ ಪ್ರಶಸ್ತಿ ವಿಜೇತ ಸಾಹಿತಿಗಳ ಹೆಸರನ್ನು ಬರೆಯಿರಿ.

ಉತ್ತರ:. .ರಾ. ಬೇಂದ್ರೆ, ವಿ. ಕೃ .ಗೋಕಾಕ್, ಗಿರೀಶ್ ಕಾರ್ನಾಡ್, ಚಂದ್ರಶೇಖರ ಕಂಬಾರ ಇವರು ಬೆಳಗಾವಿ ವಿಭಾಗದ ನಾಲ್ವರು ಜ್ಞಾನಪೀಠ ಪ್ರಶಸ್ತಿ ವಿಜೇತರು.

16. ಬೆಳಗಾವಿ ವಿಭಾಗದ ಮೂವರು ಪ್ರಸಿದ್ಧ ಸಂಗೀತಗಾರರ ಹೆಸರನ್ನು ಬರೆಯಿರಿ.

ಉತ್ತರ : ಭಾರತ ರತ್ನ ಪಂ. ಭೀಮಸೇನ್ ಜೋಶಿ, ಪಂ. ಮಲ್ಲಿಕಾರ್ಜುನ ಮನ್ಸೂರ್, ಸಿತಾರ್ ವಿದುಷಿ ಗಂಗೂಬಾಯಿ ಹಾನಗಲ್ ,ಇವರುಗಳು ಬೆಳಗಾವಿ ವಿಭಾಗದ ಪ್ರಖ್ಯಾತ ಸಂಗೀತಗಾರರು.

17. ಬೆಳಗಾವಿ ಪ್ರದೇಶದ 2 ಪ್ರಸಿದ್ಧ ನಾಟಕ ಪ್ರಕಾರಗಳ ಹೆಸರನ್ನು ಬರೆಯಿರಿ.

ಉತ್ತರ : ಬೆಳಗಾವಿ ಪ್ರದೇಶದ ಎರಡು ಪ್ರಸಿದ್ಧ ನಾಟಕ ಪ್ರಕಾರಗಳೆಂದರೆ ಶ್ರೀ ಕೃಷ್ಣ ಪಾರಿಜಾತ ,ಬಡಗು ತಿಟ್ಟು ಯಕ್ಷಗಾನ.

18. ಬೆಳಗಾವಿ ವಿಭಾಗದ ಯಾವ ಜಿಲ್ಲೆಯಲ್ಲಿ ಕರ್ನಾಟಕ ಕಾನೂನು ವಿಶ್ವವಿದ್ಯಾಲಯವಿದೆ?

ಉತ್ತರ : ಬೆಳಗಾವಿ ವಿಭಾಗದ ಹುಬ್ಬಳ್ಳಿ ಜಿಲ್ಲೆಯಲ್ಲಿ ಕರ್ನಾಟಕ ಕಾನೂನು ವಿಶ್ವವಿದ್ಯಾಲಯವಿದೆ.

19. ಗ್ರಾಮೀಣ ಪ್ರದೇಶದಲ್ಲಿ ಸರ್ಕಾರ ಸ್ಥಾಪಿಸಿರುವ ಆರೋಗ್ಯ ಕೇಂದ್ರಗಳ ಹೆಸರೇನು?

ಉತ್ತರ:. ಗ್ರಾಮೀಣ ಪ್ರದೇಶದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಇವೆ.

20. ಈ ವಿಭಾಗದ ಯಾವ ಜಿಲ್ಲೆಯಲ್ಲಿ ತೋಟಗಾರಿಕೆ ವಿಶ್ವವಿದ್ಯಾಲಯವಿದೆ?

ಉತ್ತರ : ಬೆಳಗಾವಿ ವಿಭಾಗದ ಬಾಗಲಕೋಟೆ ಜಿಲ್ಲೆಯಲ್ಲಿ ತೋಟಗಾರಿಕೆ ವಿಶ್ವವಿದ್ಯಾಲಯವಿದೆ.

21. ಕರ್ನಾಟಕ ರಾಜ್ಯದಲ್ಲಿ ಪ್ರಥಮ ಮಹಿಳಾ ವಿಶ್ವವಿದ್ಯಾಲಯ ಎಲ್ಲಿ ಆರಂಭಿಸಲಾಗಿದೆ?

ಉತ್ತರ: ಕರ್ನಾಟಕ ರಾಜ್ಯದಲ್ಲಿ ಪ್ರಥಮ ಮಹಿಳಾ ವಿಶ್ವವಿದ್ಯಾಲಯ ವಿಜಯಪುರದಲ್ಲಿ ಆರಂಭಿಸಲಾಗಿದೆ.

22. ಬೆಳಗಾವಿ ವಿಭಾಗದ ಯಾವ ರಾಣಿಯೂ ಬ್ರಿಟಿಷರ ವಿರುದ್ಧ 1824ರಲ್ಲಿ ಹೋರಾಟ ನಡೆಸಿದ್ದಳು?

ಉತ್ತರ:. ಕಿತ್ತೂರು ರಾಣಿ ಚೆನ್ನಮ್ಮ 1824ರಲ್ಲಿ ಬ್ರಿಟಿಷರ ವಿರುದ್ಧ ಹೋರಾಟ ನಡೆಸಿದಳು.

23. ಮೂವರು ಪ್ರಮುಖ ಸ್ವಾತಂತ್ರ್ಯ ಹೋರಾಟಗಾರರ ಹೆಸರನ್ನು ಬರೆಯಿರಿ.

ಉತ್ತರ:. ಸಿದ್ದಪ್ಪ ಕಂಬಳಿ, ಆಲೂರು ವೆಂಕಟರಾವ್, ಗಂಗಾಧರ ರಾವ್ ದೇಶಪಾಂಡೆ ಇವರು ಈ ವಿಭಾಗದ ಪ್ರಮುಖ ಸ್ವಾತಂತ್ರ ಹೋರಾಟಗಾರರು.

24. ಬೆಳಗಾವಿ ವಿಭಾಗದಲ್ಲಿ ಪತ್ರಿಕೋದ್ಯಮದಲ್ಲಿ ಅಪಾರ ಕಾಣಿಕೆ ನೀಡಿದ ಇಬ್ಬರು ಪ್ರಮುಖರ ಹೆಸರನ್ನು ಬರೆಯಿರಿ.

ಉತ್ತರ : ಬೆಳಗಾವಿ ವಿಭಾಗದಲ್ಲಿ ಪತ್ರಿಕೋದ್ಯಮದಲ್ಲಿ ಅಪಾರ ಕಾಣಿಕೆ ನೀಡಿದವರು ಮೊಹರೆ ಹಣಮಂತ ರಾಯರು , ಪಾಟೀಲ್ ಪುಟ್ಟಪ್ಪ.

ಖಾಲಿ ಜಾಗ ಭರ್ತಿ ಮಾಡಿ.

ಬೆಳಗಾವಿ ವಿಭಾಗದ ಜಿಲ್ಲೆಗಳು 1956ನೇ ವರ್ಷ ಕರ್ನಾಟಕದಲ್ಲಿ ವಿಲೀನಗೊಂಡವು.

Leave a Comment